ಧಾರವಾಡ: ‘ವಿಪಕ್ಷ ನಾಯಕ ಆರ್. ಅಶೋಕ ಅವರ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಈ ಎರಡೂ ಪ್ರಕರಣವನ್ನು ಪರಸ್ಪರ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಮಾಜಿ ಸಿಎಂ, ಬೆಳಗಾವಿಯ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ರವಿವಾರ(ಅ6) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಈಗಾಗಲೇ ಭೂ ವಂಚನೆ ಪ್ರಕರಣವು ಕೋರ್ಟ್‌ನಿಂದ ಎಲ್ಲವೂ ಬಗೆಹರಿದಿದೆ ಎಂಬುದಾಗಿ ಆರ್.ಅಶೋಕ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಈಗ ಸಿದ್ದರಾಮಯ್ಯನವರು ತಮ್ಮ ಪ್ರಕರಣದ ಜತೆ ಇನ್ನೊಬ್ಬರ ಕೇಸ್ ಹೋಲಿಕೆ ಮಾಡಬಾರದು’ ಎಂದರು.
‘ಆರ್. ಅಶೋಕ ಅವರು ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಸಹ ಕೊಟ್ಟಿದ್ದಾರೆ. ಕೋರ್ಟ್‌ನಲ್ಲೇ ಅಶೋಕ ಅವರ ತಪ್ಪಿಲ್ಲ ಎಂಬುದಾಗಿ ಸಾಬೀತಾಗಿದೆ. ಈಗ ಮುಡಾ ಹಗರಣ ಎದ್ದಿದೆ. ತನಿಖೆಗೆ ಆದೇಶ ಕೂಡ ಆಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಸಹ ಕೊಡಲಿಲ್ಲ. ಈ ಬಗ್ಗೆಯ ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದರು.ಎಲ್ಲೋ ಒಂದು ಕಡೆ ಈ ಪ್ರಕರಣದಿಂದ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.
Laxmi News 24×7