ಖಾನಾಪುರ: ‘ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮೆಲ್ಲ ಮೇಲಿದೆ. ಪ್ರಪಂಚ ನಮ್ಮ ವನ್ಯಸಂಪತ್ತು ಮತ್ತು ವನ್ಯಜೀವಿಗಳ ಮೇಲೆ ಅವಲಂಬಿಸಿದೆ’ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ತಾಲ್ಲೂಕಿನ ಶಿರೋಲಿಯಿಂದ ಹೆಮ್ಮಡಗಾ ವರೆಗೆ ಭಾನುವಾರ ನಡೆದ 7 ಕಿ.ಮೀ.
ಕಾಲ್ನಡಿಗೆ ಜಾಥಾದಲ್ಲಿ ಅವರು ಮಾತನಾಡಿದರು.
‘ಅರಣ್ಯಗಳು ಪ್ರಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವನ್ಯಜೀವಿಗಳು ಅರಣ್ಯದ ಮೆರುಗು ಮತ್ತು ವೈಭವ ಹೆಚ್ಚಿಸುತ್ತವೆ. ಅರಣ್ಯ ಸಮೃದ್ಧವಾಗಿದ್ದರೆ ಉತ್ತಮ ಮಳೆ-ಬೆಳೆ ಸಾಧ್ಯ ಎಂದು ಅರಿಯಬೇಕು. ಇಂತಹ ಸಮೃದ್ಧ ಅರಣ್ಯ ಪ್ರದೇಶವನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ನಾವೆಲ್ಲರೂ ಕಟಿಬದ್ಧರಾಗಬೇಕು’ ಎಂದು ಕರೆ ನೀಡಿದರು.