ಬೆಳಗಾವಿ: ‘ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನ ಪರಿಸರಕ್ಕೆ ಮಾರಕವಾಗಲಿದೆ. ಇದರ ಬಗ್ಗೆ ಮಹದಾಯಿ ಜಲವಿವಾದ ನ್ಯಾಯಾಧಿಕರಣ ನೀಡಿದ ತೀರ್ಪು ಕೂಡ ಅವೈಜ್ಞಾನಿಕವಾಗಿದೆ’ ಎಂದು ವಿವಿಧ ಪರಿಸರ ಸಂಘಟನೆಗಳ ಕಾರ್ಯಕರ್ತರು ಜಂಟಿ ಹೇಳಿಕೆ ನೀಡಿದರು.
ಪರ್ಯಾವರಣಿ, ಪರಿಸರಕ್ಕಾಗಿ ನಾವು, ಪರಿವರ್ತನಾ, ಗ್ರಾಕೂಸ್ ಹಾಗೂ ಜಾಗೃತಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೊರಲಿನಿಂದ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ನಿತಿನ್ ಧೋಂಡ ಮಾತನಾಡಿ, ‘ನ್ಯಾಯಾಧಿಕರಣದ ತೀರ್ಪಿನ ಪ್ರಕಾರ, ಕುಡಿಯುವ ನೀರಿನ ಅಗತ್ಯತೆ ಪೂರೈಸಲು ಮಲಪ್ರಭಾ ನದಿಗೆ ಸುಮಾರು 3.94 ಟಿಎಂಸಿ ಅಡಿ ನೀರನ್ನು ತಿರುಗಿಸಲಾಗುವುದು. ಆದರೆ, ಈ ಯೋಜನೆಯಡಿ ಅಣೆಕಟ್ಟು, ಕಾಲುವೆಗಳ ನಿರ್ಮಾಣದಿಂದ ಅರಣ್ಯಕ್ಕೆ ಹಾನಿಯಾಗಲಿದೆ. 2 ಲಕ್ಷಕ್ಕೂ ಹೆಚ್ಚು ಮರ ಕಡಿಯಲಿದ್ದು, ಹುಲಿ ಕಾರಿಡಾರ್ ಸೇರಿದಂತೆ ಅಭಯಾರಣ್ಯಗಳಿಗೆ ತೊಂದರೆಯಾಗಲಿದೆ’ ಎಂದರು.
‘