Breaking News

ಕಿವುಡ ಮಕ್ಕಳ ಶಾಲೆಯಲ್ಲಿ ಗಾಂಧಿ ಜಯಂತಿ

Spread the love

ಬೆಳಗಾವಿ: ಇಲ್ಲಿನ ಆಜಮ್‌ ನಗರದ ಸರ್ಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ಬುಧವಾರ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಮಾತು ಬಾರದ ಹಾಗೂ ಕಿವಿ ಕೇಳದ ಮಕ್ಕಳೇ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಸಾಧನೆಗಳನ್ನು ಸಂಜ್ಞೆಯ ಬಿತ್ತರಿಸಿದರು.

ವಿದ್ಯಾರ್ಥಿಗಳೇ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.

ಸಂಜ್ಞೆಯ ಮೂಲಕವೇ ಭಾಷಣ ಮಾಡಿದರು. ನಿರೂಪಣೆ, ಸ್ವಾಗತ, ಮಾಲಾರ್ಪಣೆ, ವಂದನಾರ್ಪಣೆ ಎಲ್ಲವೂ ವಿದ್ಯಾರ್ಥಿನಿಯರೇ ಮಾಡಿ ಗಮನ ಸೆಳೆದರು.

ಇದಕ್ಕೂ ಮುನ್ನ ಶ್ರಮದಾನದ ಮಾಡಿದ ಶಿಕ್ಷಕಿ ಪಿ.ರತ್ನಮ್ಮ ಮಾರ್ಗದರ್ಶನದಲ್ಲಿ ರೂಪಾಲಿ ಹಾಂಕಾಳೆ ಮತ್ತು ಸರಸ್ವತಿ ಭಟ್ಟಿ ಮಹಾತ್ಮರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿರು. ಸರಸ್ವತಿ ಮತ್ತು ಐಶು ವಡ್ಡರ ಸಂಜ್ಞಾ ಭಾಷಣ ಮಾಡಿದರು.

ಶಾಲೆಯ ಅಧೀಕ್ಷಕಿ ಮಂದಾಕಿನಿ ವಂಡಕರ, ಶಿಕ್ಷಕರಾದ ಸವಿತಾ ಹೊಳಿ, ವಾಸಂತಿ ಶಿಂಗೆ, ಸೂರ್ಯಕಾಂತ ಹೂಗಾರ, ಶಿಕ್ಷಕೇತರ ಸಿಬ್ಬಂದಿಯಾದ ಗಾಯತ್ರಿ ಕಡಬೂರ, ಯಲ್ಲವ್ವ ಭೂಸಗೊನ್ನ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ