Breaking News

ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

Spread the love

ಹುಕ್ಕೇರಿ: ಪ್ರಸಕ್ತ ವರ್ಷದ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಶಾಸಕ ನಿಖಿಲ್ ಕತ್ತಿ ಸೋಮವಾರ ಚಾಲನೆ ನೀಡಿದರು.

ಪಟ್ಟಣದ ಹೊರವಲಯದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.

ಈ ಹಂಗಾಮಿಗೆ ಬೇಕಾದ ಗುಣಮಟ್ಟದ ಕಡಲೆ, ಜೋಳ ಬೀಜದ ದಾಸ್ತಾನು ಇದ್ದು, ಬೀಜಗಳ ವಿತರಣೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

 

‘ಹುಕ್ಕೇರಿ, ಸಂಕೇಶ್ಚರ, ಯಮಕನಮರಡಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ 90 ಕ್ವಿಂಟಲ್ ಕಡಲೆ ಬೀಜ, 80 ಕ್ವಿಂಟಲ್ ಜೋಳದ ಬೀಜ ಸಂಗ್ರಹವಿದೆ. ಸಂಕೇಶ್ವರ ಟಿಎಪಿಸಿಎಂಸಿಯಲ್ಲಿ ಸೋಯಾಬೀನ್ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಖರೀದಿಸಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಕೃಷಿ ಸಂರಕ್ಷಣೆ ಯೋಜನೆಯಡಿ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನದಲ್ಲಿ ಮಂಜೂರಾದ ಹಿಟ್ಟಿನ ಗಿರಣಿ, ಶಾವಿಗೆ ಯಂತ್ರ, ಕೃಷಿ ಯಂತ್ರೋಪಕರಣ ಯೋಜನೆಯಡಿ ನೇಗಿಲು, ರಾಶಿ ಯಂತ್ರ, ಮೇವು ಕತ್ತರಿಸುವ ಯಂತ್ರ, ಪವರ್ ಟಿಲ್ಲರ್‌ ವಿತರಿಸಿದರು.

ಚಿಕ್ಕೋಡಿ ಕೃಷಿ ಇಲಾಖೆಯ ಉಪನಿರ್ದೇಶಕ ಎಚ್.ಡಿ. ಕೋಳೆಕರ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ. ನಾಯ್ಕರ, ತಾಂತ್ರಿಕ ಅಧಿಕಾರಿ ಪುರುಷೋತ್ತಮ ಪೀರಾಜೆ, ಹಿರಾ ಶುಗರ್ಸ್ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ, ಹಿರಿಯ ವಕೀಲ ಬಿ.ಕೆ. ಮಗೆನ್ನವರ, ಚಿಕ್ಕೋಡಿ ಬಿಜೆಪಿ ಘಟಕದ ಜಿಲ್ಲಾ ಉಪಾಧ್ಯಕ್ಷ ಸತ್ಯಪ್ಪ ನಾಯಿಕ, ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಪುರಸಭೆ ಸದಸ್ಯ ರಾಜು ಮುನ್ನೋಳಿ, ಮಾಜಿ ಉಪಾಧ್ಯಕ್ಷ ಗುರು ಕುಲಕರ್ಣಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ್ ಬ್ಯಾಳಿ, ಮುಖಂಡರಾದ ಆನಂದ ಲಕ್ಕುಂಡಿ, ಚನ್ನಪ್ಪ ಗಜಬರ, ಕೃಷಿ ಅಧಿಕಾರಿಗಳು, ಆತ್ಮಾ ಸಿಬ್ಬಂದಿ ಸಮೀರ್ ಲೋಕಾಪುರ ಇದ್ದರು.


Spread the love

About Laxminews 24x7

Check Also

ಧಾರವಾಡದಲ್ಲಿ 54 ಜೂಜಾಟದ ಪ್ರಕರಣಗಳು ದಾಖಲು

Spread the love ಧಾರವಾಡ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸುವ ಕುರಿತು ಸೂಕ್ತ ಮಾಹಿತಿ ಸಂಗ್ರಹಿಸಿ ಅಕ್ಟೋಬರ್​​ 20 ರಿಂದ 23ರವರೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ