Breaking News

ಚಿಪ್ಪು ಹಂದಿ ಮಾರಾಟ ಯತ್ನ: ಬಂಧನ

Spread the love

ಖಾನಾಪುರ: ಅಪರೂಪದ ಚಿಪ್ಪು ಹಂದಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ತಾಲ್ಲೂಕಿನ ಲೋಂಡಾ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ, ಚಿಪ್ಪು ಹಂದಿ ವಶಕ್ಕೆ ಪಡೆದಿದ್ದಾರೆ. ಸಹಚರರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಖಾನಾಪುರ- ಲೋಂಡಾ ರಾಷ್ಟ್ರೀಯ ಹೆದ್ದಾರಿಯ ವಾಟರೆ ರೈಲ್ವೆ ಗೇಟ್ ಬಳಿ ಬೈಕ್ ಸವಾರನನ್ನು ತಡೆದು ತಪಾಸಣೆ ನಡೆಸಿದ ಅಧಿಕಾರಿಗಳು, ಆತನ ಬಳಿಯಿದ್ದ ಚೀಲವೊಂದರಲ್ಲಿದ್ದ ನಾಲ್ಕು ಕಿಲೋ ತೂಕದ ಚಿಪ್ಪು ಹಂದಿ ಪತ್ತೆ ಹಚ್ಚಿದರು.

 

ಬೈಕ್ ಸವಾರ ಜೊಯಿಡಾದ ನಾಗೇಶ ಸುತಾರ ಮತ್ತು ಹಿಂಬದಿ ಸವಾರನನ್ನು ಬಂಧಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ನಡೆಯುತ್ತಿದೆ. ಖಾನಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಆರ್.ಎಫ್.ಒಗಳಾದ ತೇಜ ವೈ.ಪಿ, ಶ್ರೀಕಾಂತ ಪಾಟೀಲ, ಡಿಆರ್.ಎಫ್.ಒ ಎಂ.ಜಿ ನಂದೆಪ್ಪಗೋಳ‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇದ್ದರು.


Spread the love

About Laxminews 24x7

Check Also

ಅ.30 ರಂದು ರೆಡ್ ಕ್ರಾಸ್ ಬೆಳಗಾವಿ ಜಿಲ್ಲಾ ಶಾಖೆ ಚುನಾವಣೆ; ಅನೀಲ್ ಚೌಗುಲೆ ರೆಡ್ ಕ್ರಾಸ್ ಬೆಳಗಾವಿ ಜಿಲ್ಲಾ ಶಾಖೆ ಚುನಾವಣೆ

Spread the love ಅ.30 ರಂದು ರೆಡ್ ಕ್ರಾಸ್ ಬೆಳಗಾವಿ ಜಿಲ್ಲಾ ಶಾಖೆ ಚುನಾವಣೆ; ಅನೀಲ್ ಚೌಗುಲೆ ರೆಡ್ ಕ್ರಾಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ