Breaking News

ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Spread the love

ಮೇಷ: ಮನಸ್ಸಿನ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗಸ್ಥರು, ವ್ಯವಹಾರಸ್ಥರಿಗೆ ಶುಭ ಸೂಚನೆ. ಹಳೆಯದಾದ ಜಟಿಲ ಸಮಸ್ಯೆಗೆ ಪರಿಹಾರ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ.

ಗುರುಸಮಾನರ ಅಕಸ್ಮಾತ್‌ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ಪರೀಕ್ಷಾ ತಯಾರಿಗೆ ಗಮನ.

ಮಿಥುನ: ಪೂರ್ವಜರ ಸ್ಮರಣೆಯಿಂದ ಹಿತ. ಕುಟುಂಬದ ಕ್ಷೇಮದ ಕುರಿತು ಚಿಂತನೆ. ಜೀವನದಲ್ಲಿ ಹಿರಿಯರ ಆರೋಗ್ಯದತ್ತ ಗಮನವಿರಲಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ ನಿರೀಕ್ಷೆ. ಸಣ್ಣ ಪ್ರಯಾಣದ ಸಾಧ್ಯತೆ.

ಕರ್ಕಾಟಕ: ನಾಮಸ್ಮರಣೆಯ ಮೂಲಕ ಖಿನ್ನತೆಯನ್ನು ತೊಲಗಿಸಿ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸಿನತ್ತ ದಾಪುಗಾಲು. ವೈವಾಹಿಕ ಜೀವನದಲ್ಲಿ ಸಂತೃಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿ, ಮಕ್ಕಳಿಗೆ ಆನಂದ.

ಸಿಂಹ: ಕಾರ್ಯತತ್ಪರರಿಗೆ ಶ್ಲಾಘನೆ. ಹೊಸ ಅವಕಾಶ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ. ಗುರುಹಿರಿಯರ ಮಾರ್ಗದರ್ಶನದಿಂದ ಕಾರ್ಯ ಯಶಸ್ವಿ. ವ್ಯವಹಾರದ ಸಂಬಂಧ ಪ್ರಯಾಣ ಮುಂದಕ್ಕೆ.

ಕನ್ಯಾ: ಆವಶ್ಯಕತೆಗೆ ಸರಿಯಾಗಿ ಧನಾಗಮ. ದೂರದಿಂದ ಶುಭವಾರ್ತೆ. ವಾಹನ ಖರೀದಿ ಯೋಜನೆ ಮುನ್ನಡೆ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ. ಉದ್ಯೋಗ ಅನ್ವೇಷಣೆಯಲ್ಲಿ ಪ್ರಗತಿ.

ತುಲಾ: ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಪತಿ- ಪತ್ನಿಯರೊಳಗೆ ಪರಸ್ಪರ ಸಹಕಾರ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ ಲಭ್ಯ. ಮಕ್ಕಳಿಂದ ಮನೆಯಲ್ಲಿ ಸಂತಸ.

ವೃಶ್ಚಿಕ: ಸತ್ಕರ್ಮಗಳ ಫ‌ಲ ಲಭಿಸುವ ಸಮಯ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು.ಆಯೋಜಿತ ಕಾರ್ಯ ಮುಂದೂಡಿಕೆ. ಗೃಹಿಣಿಯರಿಗೆ, ಮಕ್ಕಳಿಗೆ ಶುಭದಿನ.

ಧನು: ಸಮಾಧಾನದ ವರ್ತನೆಯಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ಉದ್ಯೋಗ ಅನ್ವೇಷಣೆ ಯಶಸ್ವಿ. ನಿಲ್ಲಿಸಿದ್ದ ವ್ಯವಹಾರ ಪುನರಾರಂಭಕ್ಕೆ ಚಿಂತನೆ.

ಮಕರ: ನಡೆನುಡಿಯಲ್ಲಿ ಸಮಾಧಾನವಿರಲಿ. ಉದ್ಯೋಗ, ವ್ಯವಹಾರ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಕೃಷಿಯಲ್ಲಿ ತೊಡಗಲು ಆಸಕ್ತಿ.

ಕುಂಭ: ಸೇವಾ ಕಾರ್ಯಗಳಲ್ಲಿ ಆಸಕ್ತಿ ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ವಾತಾವರಣ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ. ಕೃಷ್ಯುತ್ಪನ್ನದಿಂದ ಲಾಭ.

ಮೀನ: ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ. ದಾಯಾದಿಗಳಿಂದ ಸಹಕಾರ. ಕೃಷ್ಯುತ್ಪನ್ನಗಳಿಂದ ಲಾಭ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ. ಸರಕಾರಿ ಅಧಿಕಾರಿಗಳಿಂದ ಸಹಾಯದ ಭರವಸೆ.


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ