Breaking News

ಕಾಡಲ್ಲಿ ಪ್ರಾಣಿ ನಂಬಿ ಬದುಕಬಹುದು ಆದರೆ ನಾಡಲ್ಲಿ ಮನುಷ್ಯನ್ನ ನಂಬೋಕೆ ಆಗಲ್ಲ: ದುನಿಯಾ ವಿಜಯ್

Spread the love

ಚಾಮರಾಜನಗರ: ಕಾಡು ಯಾವಾಗಲೂ ಶಾಂತ, ಕಾಡಲ್ಲಿ ಪ್ರಾಣಿ ನಂಬಿ ಬದುಕಬಹುದು ಆದರೆ ನಾಡಲ್ಲಿ ಮನುಷ್ಯನ್ನ ನಂಬೋಕೆ ಆಗಲ್ಲ. ಹೀಗಾಗಿ ಕಾಡಿನತ್ತ ಹೆಚ್ಚು ಒಲವು ಎಂದು ನಟ ದುನಿಯಾ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲೆಯ ಗುಂಡ್ಲುಪೇಟೆಗೆ ದುನಿಯಾ ವಿಜಯ್ ಭೇಟಿ ನೀಡಿದ್ದು, ಅಭಿಮಾನಿಗಳನ್ನು ಪುಳಕಿತರನ್ನಾಗಿಸಿದ್ದಾರೆ. ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ನಿರ್ದೇಶಿಸುತ್ತಿರುವ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಜನವರಿಯಲ್ಲಿ ನಾನು ನಿರ್ದೇಶಿಸುತ್ತಿರುವ ಚಿತ್ರದ ಬಗ್ಗೆ ರಿವೀಲ್ ಮಾಡುತ್ತೇವೆ ಎಂದು ತಿಳಿಸಿದರು.

ಕಾಡೆಂದರೆ ನನಗೆ ತುಂಬಾ ಇಷ್ಟ, ಯಾವಾಗಲೂ ಶಾಂತವಾಗಿರುತ್ತದೆ. ಅಲ್ಲದೆ ಕಾಡಿನಲ್ಲಿ ಪ್ರಾಣಿಗಳನ್ನು ಬೇಕಾದರೆ ನಂಬಿ ಬದುಕಬಹುದು. ಆದರೆ ನಾಡಿನಲ್ಲಿ ಮನುಷ್ಯರನ್ನು ನಂಬಿ ಬದುಕಲು ಆಗಲ್ಲ. ನನಗೆ ಕಾಡೆಂದರೆ ತುಂಬಾ ಇಷ್ಟ, ಹೀಗಾಗಿ ಇತ್ತೀಚೆಗೆ ಕಾಡಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೇನೆ ಎಂದರು.


Spread the love

About Laxminews 24x7

Check Also

ಅಧಿವೇಶನ ‘ಪಿಕ್ನಿಕ್ ‘ಸ್ಪಾಟ್’ ಆಗಬಾರದು:

Spread the love ಬೆಳಗಾವಿ ವಿಧಾನಸೌಧ ಅಧಿವೇಶನ ಒಂದು ವಿಶ್ಲೇಷಣೆ! ಡಾಕ್ಟರ್ ಪ್ರಭಾಕರ ಕೋರೆ! ಸುವರ್ಣ ಸೌಧ ಉದ್ದೇಶ ಈಡೇರಿಲ್ಲ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ