ಬೆಂಗಳೂರು, ಸೆಪ್ಟೆಂಬರ್, 18: ಬೆಂಗಳೂರಿನ ಜೀವನಾಡಿ ಸಾರೊಗೆಯಲ್ಲೊಂದಾದ ಬಿಎಂಟಿಸಿ ಸುದ್ದಿಯಾಗುತ್ತಲೇ ಇದೆ. ಬಿಎಂಸಿಟಿ ಬಸ್‌ಗಳಿಗೆ ಹಲವರು ಬಲಿಯಾದ ಘಟನೆಗಳು ಈಗಾಗಲೇ ಸುಮಾರು ನಡೆದಿವೆ. ಇದರ ಬೆನ್ನಲ್ಲೇ ಇದೀಗ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಪಘಾತಕ್ಕೆ ಕಾರಣ ಏನು.?: ಬಿಎಂಟಿಸಿ ಬಸ್ಸೊಂದು ನಗರದ ಯಶವತಪುರದಿಂದ ಮೆಜೆಸ್ಟಿಕ್‌ಗೆ ಬರುತ್ತಿದ್ದ ವೇಳೆಯೇ ಈ ಅಪಘಾತ ಸಂಭವಿಸಿದೆ. ಇನ್ನು ಘಟನೆಗೆ ಅತಿವೇಗದ ಚಾಲನೆಯೇ ಕಾರಣ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ.
ಉಪ್ಪಾರಪೇಟೆ ಪೊಲೀಸರು ವಶಕ್ಕೆ: ಇನ್ನು ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಚಾಲಕ ಗೋಪಾಲಯ್ಯ ಎಂಬುವವರನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ, ಈ ಹಿಂದೆಯೂ ಸಹ ಬಿಎಂಟಿಸಿ ಬಸ್‌ಗಳು ಹಲವರನ್ನು ಬಲಿ ಪಡೆದ ಉದಾಹರಣೆಗಳಿವೆ. ಹಳೆಯ ಬಸ್‌ಗಳನ್ನೇ ಓಡಿಸಲು ಕೊಡುತ್ತಿದ್ದಾರೆ. ಇದರಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಅಮಾಯಕ ಜನರೇ ಬಲಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ.