ಪಿತೃ ಪಕ್ಷ 2024 ಯಾವಾಗ ಆರಂಭ? ಈ ಸಮಯದಲ್ಲಿ ಏನು ಮಾಡಬಾರದು? ದಿನಾಂಕ ಮರೆತು ಹೋದ್ರೆ ಏನು ಮಾಡಬೇಕು?
ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ತಿಥಿ ಕಾರ್ಯವನ್ನು ಮಾಡುತ್ತಾರೆ. ವಾಸ್ತವವಾಗಿ, ಶ್ರಾದ್ಧ ಪಕ್ಷದ 16 ದಿನಗಳ ಅವಧಿಯಲ್ಲಿ, ಸತ್ತವರು ಭೂಮಿಗೆ ಬರುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಶ್ರಾದ್ಧವನ್ನು ಮಾಡಿದರೆ ಅದು ಅವರ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
ಪಿತೃ ಪಕ್ಷದ ಸಂದರ್ಭದಲ್ಲಿ ಜನರು ತಮ್ಮ ಪೂರ್ವಜರಿಗೆ ಶ್ರಾದ್ಧ ಮತ್ತು ತಪರ್ಣವನ್ನು ಮಾಡುತ್ತಾರೆ. ಪಿತ್ರ ಪಕ್ಷದ ಬಗ್ಗೆ ಪ್ರತಿಯೊಂದು ಸಣ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹಾಗಿದ್ದರೆ ಪಿತೃ ಪಕ್ಷ 2024ರ ಈ ವರ್ಷ ಯಾವಾಗ ಆರಂಭವಾಗುತ್ತದೆ? ಯಾವಾಗ ಕೊನೆ ದಿನ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಪಿತೃ ಪಕ್ಷದ ಸಂಪೂರ್ಣ ವಿವರ:
ಹಿಂದೂ ಕ್ಯಾಲೆಂಡರ್ ಪ್ರಕಾರ, 2024ರ ಪಿತೃ ಪಕ್ಷವು ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಪ್ರಾರಂಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಎರಡೂ ದಿನಾಂಕಗಳ ನಡುವಿನ ಈ 16 ದಿನಗಳು ಪೂರ್ವಜರನ್ನು ಪೂಜಿಸಲು ಮತ್ತು ಶಾಂತಿ ಮತ್ತು ಆಶೀರ್ವಾದವನ್ನು ಪಡೆಯಲು ವಿಶೇಷವೆಂದು ನಂಬಲಾಗಿದೆ. ಹಿಂದು ಧಾರ್ಮಿಕ ನಂಬಿಕೆಗಳ ಪ್ರಕಾರ, ಪಿತೃಪಕ್ಷದ ಸಮಯದಲ್ಲಿ, ಪೂರ್ವಜರ ಆತ್ಮಗಳು ಭೂಮಿಗೆ ಇಳಿಯುತ್ತವೆ. ಈ ಸಮಯದಲ್ಲಿ ಅವರ ಕುಟುಂಬದವರು ಪಿಂಡದಾನ, ಶ್ರಾದ್ಧ ವಿಧಿವಿಧಾನಗಳು ಮತ್ತು ತರ್ಪಣವನ್ನು ಮಾಡಿದರೆ, ಆತ್ಮಗಳು ಸಂತೋಷಪಡುತ್ತವೆ.
Laxmi News 24×7