ಬೆಂಗಳೂರು: ಆನ್ಲೈನ್ ಗೇಮ್, ಬೆಟ್ಟಿಂಗ್ ಆಯಪ್ ನಿಷೇಧಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.
ಯುವಜನತೆಯನ್ನು ಹಾಳು ಮಾಡಿ ಬಡ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿರುವ ಆನ್ಲೈನ್ ಗೇಮ್ ಮತ್ತು ಬೆಟ್ಟಿಂಗ್ ಮತ್ತಿತರ ಆಯಪ್ ಗಳನ್ನು ನಿರ್ಬಂಧಿಸಬೇಕೆಂದು ಕೋರಿದ್ದಾರೆ.
ಮಕ್ಕಳು, ಯುವಜನತೆ ಆನ್ಲೈನ್ ಬೆಟ್ಟಿಂಗ್ ಆಯಪ್ ಗಳ ವ್ಯಸನಿಗಳಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಮತ್ತು ಅವರ ಕುಟುಂಬದವರ ನೆಮ್ಮದಿ ಹಾಳಾಗುತ್ತಿದೆ. ಅನೇಕ ದಿಟ್ಟ ನಿರ್ಧಾರ ಕೈಗೊಂಡು ದೇಶಕ್ಕೆ, ಜನರಿಗೆ ಅನುಕೂಲ ಮಾಡಿರುವ ನೀವು ಆನ್ಲೈನ್ ಗೇಮ್, ಬೆಟ್ಟಿಂಗ್ ಆಯಪ್ ನಿರ್ಬಂಧಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮುಂದೆ ಈ ಬಗ್ಗೆ ತಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ ಎಂದು ಪತ್ರ ಬರೆದಿದ್ದಾರೆ.