ಗಂಡನ ಕುಡಿತ ಬಿಡಿಸಲು ಹೆಂಡತಿ ಪರದಾಡುವುದನ್ನ ನೋಡಿದ್ದೇವೆ. ಆದರೆ, ಇಲ್ಲಿ ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ರಿಹ್ಯಾಬ್ ಕೇಂದ್ರಕ್ಕೆ ಪತಿಯೇ ಸೇರಿಸಿದ್ದು, ದುರಂತ ಎಂಬಂತೆ ರಿಹ್ಯಾಬ್ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ
ಬೆಂಗಳೂರು, ಪತ್ನಿಯ ಕುಡಿತದ ಚಟ ಬಿಡಿಸುವ ಸಲುವಾಗಿ ಪತ್ನಿಯನ್ನ ರಿಹ್ಯಾಬ್ ಕೇಂದ್ರಕ್ಕೆ ಪತಿ ಸೇರಿಸಿದ್ದ. ಆದರೆ, ರಿಹ್ಯಾಬ್ ಕೇಂದ್ರದ ಕೆಲಸಗಾರನ ಜೊತೆಯೇ ಹೆಂಡತಿ ಪರಾರಿಯಾಗಿದ್ದಾಳೆ. ಹೌದು, ಈ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥನಗರದಲ್ಲಿ ನಡೆದಿದೆ. ಕೆಲಸ ಮಾಡುತ್ತಿದ್ದ ಸುನೀಲ್ ಎಂಬಾತನ ಜೊತೆ ಪರಾರಿಯಾಗಿದ್ದಾರೆ ಎಂದು ಪತಿ ಗಂಗರಾಜು ಆರೋಪಿಸಿದ್ದು, ‘ನನ್ನ ಪತ್ನಿಯನ್ನು ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ