Breaking News

‘ಕರ್ನಾಟಕ’ದಲ್ಲಿದ್ದ ಐವರು ಬಾಂಗ್ಲಾ ನಿರಾಶ್ರಿತರಿಗೆ ‘CCA ಕಾಯ್ದೆ’ಯಡಿ ‘ಭಾರತೀಯ ಪೌರತ್ವ’

Spread the love

ರಾಯಚೂರು: ಕರ್ನಾಟಕದಲ್ಲಿ ವಾಸಿಸುತ್ತಿದ್ದಂತ ಐವರು ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಪ್ ಗಳಲ್ಲಿ ಐವರು ಬಾಂಗ್ಲಾ ನಿರಾಶ್ರಿತರು ವಾಸಿಸುತ್ತಿದ್ದರು.

ಅವರಿಗೆ ಸಿಎಎ ಅಡಿಯಲ್ಲಿ ಈಗ ಭಾರತೀಯ ಪೌರತ್ವ ದೊರೆತಿದೆ.

ಸಿಂಧನೂರು ತಾಲ್ಲೂಕಿನ ಆರ್ ಹೆಚ್ ಕ್ಯಾಂಗ್ ನ ನಿವಾಸಿಗಳಾದಂತ ರಾಮಕೃಷ್ಣನ್ ಅಭಿಕರಿ, ಸುಕುಮಾರ, ಮೊಂಡಲ್, ಬಿ.ಪ್ರಸಾದ ಗೋಲ್ಡರ್, ಜಯಂತ್ ಮೊಂಡಲ್ ಹಾಗೂ ಅದ್ವಿತ ಎಂಬುವರಿಗೆ ಕೇಂದ್ರ ಗೃಹ ಇಲಾಖೆಯಿಂದ ಪೌರತ್ವ ನೀಡಿದಂತ ಸೂಚನ ಪತ್ರವನ್ನು ನೀಡಲಾಗಿದೆ.

ಅಂದಹಾಗೇ 1971ರ ಬಾಂಗ್ಲಾದೇಶ ವಿಮೋಚನಾ ವೇಳೆ ಬಾಂಗ್ಲಾ ಹಾಗೂ ಬರ್ಮಾ ವಲಸಿಗರು ಭಾರತಕ್ಕೆ ಆಗಮಿಸಿದ್ದರು. ಅವರು ಅಲ್ಲಿಂದ ಇಲ್ಲಿಯೇ ಆಶ್ರಯ ಪಡೆದುಕೊಂಡಿದ್ದರು. ಹೀಗೆ ಬಂದಂತ ಬಾಂಗ್ಲಾ ವಲಸಿಗರಲ್ಲಿ ಸಿಂಧನೂರು ತಾಲ್ಲೂಕಿನಲ್ಲೇ ಸುಮಾರು 932 ಕುಟುಂಬಗಳಿವೆ. ಅವರಿಗೆ 5 ಎಕರೆ ಜಮೀನು ನೀಡಲಾಗಿತ್ತು.

ಈ ಕುಟುಂಬಗಳಿಗೆ ಯಾವುದೇ ಸೌಲಭ್ಯ ನೀಡಲಾಗಿರಲಿಲ್ಲ. ಕಳೆದ 40 ವರ್ಷಗಳಿಂದ ಅರ್ಜಿ ಹಾಕುತ್ತಲೇ ಬಂದಿದ್ದರು. ಆದರೇ 146 ಅರ್ಜಿಗಳಲ್ಲಿ ಕೇವಲ ಐವರಿಗೆ ಮಾತ್ರವೇ ಪರಿಗಣಿಸಿ ಭಾರತೀಯ ಪೌರತ್ವವನ್ನು ಸಿಎಎ ಅಡಿಯಲ್ಲಿ ನೀಡಲಾಗಿದೆ.


Spread the love

About Laxminews 24x7

Check Also

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಶೋಷಿತ ವರ್ಗಗಳ ‘ಐಕ್ಯತಾ ಸಮಾವೇಶ’

Spread the love ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಶೋಷಿತ ವರ್ಗಗಳ ‘ಐಕ್ಯತಾ ಸಮಾವೇಶ’ ಬಹಿರಂಗ ಸಭೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ