ಜಿಯೋ ಹಾಗೂ ಏರ್ ಟೆಲ್ ಗೆ ಟಕ್ಕರ್ ನೀಡಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮುನ್ನುಗ್ಗುತ್ತಿದೆ.ಮುಂಬರುವ ವರ್ಷಗಳಲ್ಲಿ ರಾಷ್ಟ್ರವ್ಯಾಪಿ 5 ಜ ವಿಸ್ತರಿಸಲು ಬಿಎಸ್ ಎನ್ ಸಜ್ಜಾಗಿದೆ. ಇದರ ನಡುವೆ 5 ಜಿ ಸಿಮ್ ಅನ್ ಬಾಕ್ಸಿಂಗ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ದೇಶೀಯ ಟೆಲಿಕಾಂ ಕಂಪನಿಗಳ ಗುಂಪು ಬಿಎಸ್‌ಎನ್‌ಎಲ್ ಇನ್ಫ್ರಾವನ್ನು ಬಳಸಿಕೊಂಡು ಸಾರ್ವಜನಿಕ ಬಳಕೆಗಾಗಿ 5 ಜಿ ಪ್ರಯೋಗಗಳನ್ನು ನೀಡಲು ಸಿದ್ಧವಾಗಿದೆ. ಈ ಉದ್ಯಮ ಗುಂಪಿನಲ್ಲಿ ಟಾಟಾ ಕನ್ಸಲ್ಟೆನ್ಸಿ, ತೇಜಸ್ ನೆಟ್ವರ್ಕ್ಸ್, ವಿಎನ್‌ಎಲ್, ಯುನೈಟೆಡ್ ಟೆಲಿಕಾಂ, ಕೋರಲ್ ಟೆಲಿಕಾಂ ಮತ್ತು ಎಚ್‌ಎಫ್ಸಿಎಲ್ ಸೇರಿವೆ. ಬಿಎಸ್‌ಎನ್‌ಎಲ್ ನೆಟ್ವರ್ಕ್ ಬಳಸಿ 5 ಜಿ ಪ್ರಯೋಗಗಳನ್ನು ನಡೆಸಲು ಅವರು ಸಜ್ಜಾಗಿದ್ದಾರೆ.