Breaking News

ಬಿಜೆಪಿ ಕಾಲದಲ್ಲಿ ಆದ ಹಗರಣ ಒಪ್ಪಿಕೊಳ್ಳಲಿ: ಸಂತೋಷ್ ಲಾಡ್

Spread the love

ಹುಬ್ಬಳ್ಳಿ; ಬಿಜೆಪಿಯವರು ಮಾಡಿದ ಹಗರಣ ಮೊದಲು ಒಪ್ಪಿಕೊಳ್ಳಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಮೈಸೂರು ನಗರಾಭಿವೃದ್ಧಿ ಹಾಗೂ ವಾಲ್ಮೀಕಿ ನಿಗಮದಲ್ಲಿ ಹಗರಣದಲ್ಲಿ ಸಿಎಂ ರಾಜೀನಾಮೆಗೆ ವಿಚಾರವಾಗಿ ವಿರೋಧ ಪಕ್ಷಗಳು ಒತ್ತಾಯ ನಡೆಸಿವೆ.

ಬಿಜೆಪಿ ಕಾಲದಲ್ಲಿ ಆದ ಹಗರಣ ಒಪ್ಪಿಕೊಳ್ಳಲಿ: ಸಂತೋಷ್ ಲಾಡ್

ಇದಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ವಿಪಕ್ಷಗಳಿಗೆ ಸಿಎಂ ಹೇಗೆ ಸ್ಪಷ್ಟನೇ ನೀಡಬೇಕು. ಬಿಜೆಪಿ ಕಾಲದಲ್ಲಿ ಏನು ಆಗಿದೆ ಮೊದಲು ಅವರನ್ನು ಹೇಳಲಿ ಎಂದು ಗುಡುಗಿದರು.

ಬಿಜೆಪಿ ಸ್ಪಷ್ಟೀಕರಣ ನೀಡಿದೆಯಾ?

ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಹಗರಣದ ಬಗ್ಗೆ ಬಿಜೆಪಿ ಸ್ಪಷ್ಟೀಕರಣ ನೀಡಿದೆಯಾ. ಅವರ ‌ಕಾಲದಲ್ಲಿ ಆದ ಹಗರಣ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಆದ ಹಗರಣ ಕುರಿತು ತಪ್ಪು ಮಾಹಿತಿ ಕೊಟ್ಟಿದ್ದೇವೆ ಅಂತಾರಾ. ಬಿಜೆಪಿಯವರು ಮಾಡಿದ ಹಗರಣ ಮೊದಲು ಒಪ್ಪಿಕೊಳ್ಳಬೇಕು ಅವರ ಕಾಲದಲ್ಲಿ ಏನು ಆಗಿದೆ ಸ್ಪಷ್ಟತೆ ಕೊಡಲಿ ಎಂದು ಸಚಿವರು ತಿಳಿಸಿದ್ದಾರೆ.

ವಿರೋಧ ಪಕ್ಷದವರು ಏಕೆ ಪಾದಯಾತ್ರೆ ಮಾಡುತ್ತಾರೆ ಎಂದು ಅವರನ್ನೇ ಕೇಳಬೇಕು. ನಮ್ಮ ಕಾಲದಲ್ಲಿ ತಪ್ಪಾಗಿದೆ ನಾವು ಸಹ ಕಾನೂನು ಬಾಹಿರವಾಗಿ ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ 2019 ರಿಂದ 2024 ರವರೆಗೆ ಮುಡಾದಲ್ಲಿ ಹಂಚಿಕೆಯಾದ ಸೈಟ್ ಕಾನೂನು ಬಾಹಿರ ಆಗಿವೆ. ಈ ಬಗ್ಗೆ ಜನರು ಗಮನ ಹರಿಸುತ್ತಾರೆ. ಬಿಜೆಪಿ ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಿ ಎಂದಿದ್ದಾರೆ.


Spread the love

About Laxminews 24x7

Check Also

ಮೈಸೂರು ದಸರಾ 2025: ಜಂಬೂಸವಾರಿ ಮೆರವಣಿಗೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭ

Spread the love ಮೈಸೂರು: ಈ ಬಾರಿ ಸಂಭ್ರಮ ಹಾಗೂ ಅದ್ಧೂರಿ ದಸರಾ ಆಚರಿಸಲು ಜಂಬೂಸವಾರಿ ಮೆರವಣಿಗೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ