Breaking News

ಛಾವಣಿ ಕುಸಿದು ಅವಳಿ ಮಕ್ಕಳು ಸೇರಿ 3 ಸಾವು! ಮಲಗಿದ್ದವರನ್ನ ಬಲಿಪಡೆದ ಜವರಾಯ, ಪರಿಹಾರ ಘೋಷಣೆ

Spread the love

ಹಾವೇರಿ: ಬಡವ ನೀ ಮಡಗಿದಂಗೆ ಇರು ಎಂಬಂತೆ ತಾವಾಯಿತು ತಮ್ಮ ಕೆಲಸವಾಯಿತು ಎನ್ನುತ್ತಿದ್ದ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದಾರೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯ (Rain) ಕಾರಣ ಈ ಕುಟುಂಬಸ್ಥರು ರಾತ್ರಿ ಹಾಯಾಗಿ ನಿದ್ರೆಗೆ ಜಾರಿದ್ದರು. ಆದರೆ ನಸುಕಿನಜಾವ ಮಲಗಿದ್ದವರ ಮೇಲೆ ಆ ಮನೆಯ ಮೇಲ್ಚಾವಣಿ (Roof) ಯಮಸ್ವರೂಪಿಯಾಗಿದೆ.

ಏಕಾಏಕಿ ಕುಸಿದಿದ್ದರಿಂದ ಮೈಮೇಲೆ ಮಣ್ಣು ಕುಸಿದು ಮಲಗಿದ್ದ ಕುಟುಂಬ ಮೂವರ ಉಸಿರುಗಟ್ಟಿ (suffocation) ಸಾವನ್ನಪ್ಪಿದ್ದಾರೆ. ಮಳೆಯಿಂದಾದ ಈ ದುರಂತದಲ್ಲಿ ದೊಡ್ಡಮ್ಮನ ಜೊತೆ ಮಲಗಿದ್ದ ಎರಡು ಕಂದಮ್ಮಗಳ ಸಾವು ಸಂಬಂಧಿಕರನ್ನ, ನೆರೆಹೊರೆಯವರನ್ನ ಎಲ್ಲರನ್ನ ಶೋಕ ಸಾಗರದಲ್ಲಿ ಮುಳುಗಿವಂತೆ ಮಾಡಿದೆ.

ಮಲಗಿದ್ದವರನ್ನ ಬಲಿ ಪಡೆದ ಜವರಾಯಛಾವಣಿ ಕುಸಿದು ಅವಳಿ ಮಕ್ಕಳು ಸೇರಿ 3 ಸಾವು! ಮಲಗಿದ್ದವರನ್ನ ಬಲಿಪಡೆದ ಜವರಾಯ, ಪರಿಹಾರ ಘೋಷಣೆ

ಶುಕ್ರವಾರ ನಸುಕಿನಜಾವ 4 ಗಂಟೆಗೆ ಮಳೆಯ ಅಬ್ಬರದ ನಡುವೆ ಯಾರು ಊಹಿಸಲಾಗದ ದುರಂತವೊಂದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಹಾಯಾಗಿ ಮಲಗಿದ್ದ ಹರಕೋನಿ ಕುಟುಂಬಸ್ಥರ ಮೇಲೆ ಮನೆ ಮೇಲ್ವಾವಣೆ ಕುಸಿದು ಬಿದ್ದಿದೆ. ಕೂಗಾಟ ಚಿರಾಟ ಕಂಡ ಅಕ್ಕಪಕ್ಕದ ಜನರು,ಮಣ್ಣಿನಡಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಆದರೆ ಒಂದುವರೆ ವರ್ಷದ ಅವಳಿ ಕಂದಮ್ಮಗಳು, ತನ್ನ ದೊಡ್ಡಮನ ಜೊತೆ ಉಸಿರು ಚಲ್ಲಿದ್ದರು. ಅನನ್ಯ ಮತ್ತು ಅಮೂಲ್ಯ ಎಂಬ ಅವಳಿ ಮಕ್ಕಳು ಹಾಗೂ ಚನ್ನಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದರು. ಮಣ್ಣಲ್ಲಿ ಸಿಲುಕಿ ಗಾಯಗೊಂಡಿದ್ದ ಸುನೀತಾ, ಮುತ್ತು ಹಾಗೂ ಯಲ್ಲವ್ವ ಎಂಬುವವರು ರಕ್ಷಿಸಿ ಆಸ್ಪತ್ರೆ ಸೇರಿಸಲಾಗಿದೆ.

5 ಲಕ್ಷ ಪರಿಹಾರ

ಇನ್ನೂ ಈ ದುರ್ಘಟನೆ ಗೊತ್ತಾಗುತ್ತಿದ್ದಂತೆಯೆ ಹಾವೇರಿ ಜಿಲ್ಲಾಧಿಕಾರಿ ಮಹಾಂತೇಶ ಸೇರಿದಂತೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಎನ್​ಡಿಆರ್​ಎಫ್ ಮಾರ್ಗಸೂಚಿ ಅನ್ವಯ ಮೃತರ ಕುಟುಂಬದವರಿಗೆ ತಲಾ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಘಟನಾ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಂತ್ವಾನ ಹೇಳಿದರು. ವೈಯಕ್ತಿಕವಾಗಿ ತಲಾ ಒಬ್ಬೊಬ್ಬ ಮೃತರಿಗೆ 50 ಸಾವಿರ ಹಾಗೂ ಗಾಯಾಳುಗಳಿಗೆ 50 ಸಾವಿರ ಹಣ ನೀಡಿ ಸಹಾಯಹಸ್ತ ಚಾಚಿದರು. ದುರಂತಕ್ಕೆ ಕಾರಣವೇನೂ ಎಂದು ಸ್ಥಳೀಯರ ಬಳಿ ಮಾಹಿತಿ ಪಡೆದುಕೊಂಡರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ