Breaking News

FASTAG ಮುಂಭಾಗದಲ್ಲಿಇಲ್ಲದಿದ್ದರೆ ಡಬಲ್‌ ಟೋಲ್‌!

Spread the love

ಹೊಸದಿಲ್ಲಿ: ಉದ್ದೇಶಪೂರ್ವಕವಾಗಿ ವಾಹನದ ಮುಂದಿನ ಗಾಜಿಗೆ ಫಾಸ್ಟಾಗ್‌ ಅಂಟಿಸದೇ ಇರುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA), ದುಪ್ಪಟ್ಟು ಟೋಲ್‌ ವಿಧಿಸಲು ಮುಂದಾಗಿದೆ.

ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್‌ಎಚ್‌ಐಎ, ಫಾಸ್ಟಾಗ್‌ ಅಂಟಿಸದಿರುವುದರಿಂದ ಟೋಲ್‌ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾ ಗುತ್ತಿದೆ.

ಇದನ್ನು ತಡೆಯಲು ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಿದೆ.FASTAG ಮುಂಭಾಗದಲ್ಲಿಇಲ್ಲದಿದ್ದರೆ ಡಬಲ್‌ ಟೋಲ್‌!

ಫಾಸ್ಟಾಗ್‌ ನಿಯಮಗಳನ್ನು ಪಾಲಿಸ ದಿದ್ದರೆ ವಿಧಿಸಲಾಗುವ ದಂಡಗಳ ಕುರಿತು ಟೋಲ್‌ ಪ್ಲಾಜಾಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸಬೇಕು. ಫಾಸ್ಟಾಗ್‌ ಇಲ್ಲದ ವಾಹನಗಳ ನೋಂದಣಿ ನಂಬರ್‌(ವಿಆರ್‌ಎನ್‌) ಸಿಸಿಟಿವಿಯಲ್ಲಿ ದಾಖ ಲಾಗಿರಬೇಕು. ಇದರಿಂದ ಶುಲ್ಕಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ನಿರ್ವಹಣೆ ಮತ್ತು ವಾಹನವು ಟೋಲ್‌ ಲೇನ್‌ನಲ್ಲಿತ್ತು ಎಂಬುದನ್ನು ತಿಳಿಯಬಹುದು. ಫಾಸ್ಟಾಗ್‌ ಅಂಟಿಸದ ವಾಹನಗಳು ಉಚಿತ ಪ್ಲಾಜಾದಲ್ಲಿ ಹಾದು ಹೋಗಬೇಕಾಗುತ್ತದೆ ಮತ್ತು ದುಪ್ಪಟ್ಟು ಶುಲ್ಕ ಭರಿಸುವುದು ಮಾತ್ರವಲ್ಲದೇ, ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎನ್‌ಎಚ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ