ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಈ ಒಂದು ಗುಡ್ಡ ಕುಸಿತದಲ್ಲಿ ಕೇವಲ 9 ಅಲ್ಲ ಎರಡು ಕುಟುಂಬಗಳು ಸೇರಿದಂತೆ 20 ಜನರು ಸಿಲುಕಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ.
ಹೌದು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಭಾರೀ ಮಳೆಗೆ ಗುಡ್ಡ ಕುಸಿದು 7 ಮಂದಿ ಸಾವನ್ನಪಿದ್ದು ಇಬ್ಬರು ನಾಪತ್ತೆಯಾಗಿದ್ದರು ಎಂದು ಹೇಳಲಾಗಿತ್ತು.
ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಮಣ್ಣಿನ ಅಡಿ ಸಿಲುಕಿದವರು 20 ಮಂದಿ ಎಂದು ಮಾಹಿತಿ ತಿಳಿದು ಬಂದಿದೆ.
ಹೌದು ಗುಡ್ಡ ಕುಸಿತದ ಸಂದರ್ಭದಲ್ಲಿ ಮನೆ, ಅಂಗಡಿ ಕಾರಿನಲ್ಲಿದ್ದವರೂ ಸೇರಿದಂತೆ ಒಟ್ಟು 20 ಮಂದಿ ಸಿಲುಕಿದ್ದಾರೆ. ಘಟನೆ ಸಮಯದಲ್ಲಿ 20 ಕ್ಕೂ ಹೆಚ್ಚು ಜನ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗುಡ್ಡ ಕುಸಿತದಲ್ಲಿ 9 ಮಂದಿ ಅಲ್ಲ 20 ಮಂದಿ ಎಂದು ತಿಳಿದುಬಂದಿದೆ.
Laxmi News 24×7