Breaking News

ಕಿಚ್ಚ ಸುದೀಪ್ ರೆಸ್ಟೋರೆಂಟ್ ಮೇಲೆ ದಾಳಿ

Spread the love

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಒಡೆತನದ ತೆಲಂಗಾಣದಲ್ಲಿರುವ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.

ತೆಲಂಗಾಣದ ಆಹಾರ ಮತ್ತು ಸುರಕ್ಷತೆ ಆಯುಕ್ತರ ನೇತೃತ್ವದ ಕಾರ್ಯಪಡೆ ತೆಲಂಗಾಣದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿದ್ದು, ಸಿಕಂದರಬಾದ್ ನಲ್ಲಿರುವ ಕಿಚ್ಚ ಸುದೀಪ್ ಒಡೆತನದ `ವಿವಾಹ ಭೋಜನಮುಡು’ ರೆಸ್ಟೋರೆಂಟ್ ನಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದು ಪತ್ತೆಯಾಗಿದೆ.BREAKING: ಕಿಚ್ಚ ಸುದೀಪ್ ರೆಸ್ಟೋರೆಂಟ್ ಮೇಲೆ ದಾಳಿ: ಕಳಪೆ ಗುಣಮಟ್ಟದ ಆಹಾರ ಪತ್ತೆ!

ಆರಂಭದಲ್ಲಿ ಇದು ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಸೇರಿದ್ದು ಎಂದು ಹೇಳಿತ್ತು. ಆದರೆ ನಂತರ ಅದು ಸುದೀಪ್ ಅಲ್ಲ ಸಂದೀಪ್ ಕಿಶನ್ ಅವರಿಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದೆ.

2024 ಜುಲೈ 8ರಂದು ಕಾರ್ಯಪಡೆ ದಾಳಿ ನಡೆಸಿದಾಗ ಹಲವಾರು ನಿಯಮಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ. 25 ಕೆಜಿ ತೂಕದ ಚಿಟ್ಟಿ ಮುತ್ಯಾಲು ಅಕ್ಕಿಯಲ್ಲಿ 2022ರ ಅವಧಿಯಾಗಿದ್ದು, ಇದು ಅವಧಿ ಮೀರಿದ ಅಕ್ಕಿಯಾಗಿದೆ. 500 ಗ್ರಾಂ ತೂಕದ ಕೊಬ್ಬರಿಯಲ್ಲಿ ಬೂಸ್ಟ್ ಬಂದಿದ್ದು, ಅಲ್ಲದೇ ಆಹಾರಕ್ಕೆ ರಾಸಾಯನಿಕ ಮಿಶ್ರಿತ ಬಣ್ಣ ಬಳಸಿರುವುದು ದೃಢಪಟ್ಟಿದೆ.

ಪಾತ್ರೆಗಳಲ್ಲಿ ಇರಿಸಲಾದ ಕೆಲವು ಅರೆ-ಬೇಯಿಸಿದ ಆಹಾರಗಳು ಮತ್ತು ಕಚ್ಚಾ ವಸ್ತುಗಳು ಮುಚ್ಚಿಟ್ಟಿರುವುದು ಕಂಡುಬಂದಿದೆ. ಅಲ್ಲದೇ ಸರಿಯಾದ ಲೇಬಲ್‌ಗಳ ಕೊರತೆಯಿದೆ. ಕೆಲವು ಕಸದ ತೊಟ್ಟಿಗಳಿಗೆ ಮುಚ್ಚಳವೇ ಇರಲಿಲ್ಲ. ಪರಿಶೀಲನೆಯು ಅಡುಗೆಮನೆಯ ಒಳಗಿರುವ ಚರಂಡಿಗಳಲ್ಲಿ ನೀರು ನಿಂತಿರುವುದು ಪತ್ತೆಯಾಗಿದೆ. ಆಹಾರ ನಿರ್ವಾಹಕರ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರಗಳು ಲಭ್ಯವಿಲ್ಲ. “ಬಬಲ್ ವಾಟರ್” ಗಾಗಿ ನೀರಿನ ಶುದ್ದೀಕರಣದ ಪ್ರಮಾಣ ಪತ್ರ ಹೊಂದಿಲ್ಲ. ಬಬಲ್ ವಾಟರ್ ಡೈನರ್‌ಗಳಿಗೆ ಬಡಿಸಲಾಗುತ್ತದೆ ಮತ್ತು ಅಡುಗೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ.


Spread the love

About Laxminews 24x7

Check Also

ನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್!

Spread the loveನನ್ನ ದಾಖಲೆ ಸೇಫ್​. ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದ ಮುತ್ತಯ್ಯ ಮುರಳೀಧರನ್! ನವದೆಹಲಿ: ಶ್ರೀಲಂಕಾದ ಲೆಜೆಂಡರಿ ಕ್ರಿಕೆಟಿಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ