Breaking News

ಮಳೆ ಅವಾಂತರದಿಂದ ಬೀದಿಗೆ ಬಿತ್ತು ವೃದ್ಧೆಯರ ಬದುಕು

Spread the love

ಬೆಳಗಾವಿ, ಜು.09: ಮಳೆ ಅವಾಂತರಕ್ಕೆ ವೃದ್ಧೆಯರ ಬದುಕು ಬೀದಿಗೆ ಬಿದ್ದಿದ್ದು, ವೃದ್ಧೆಯರ ನರಳಾಟ ಮನಕಲಕುವಂತಿದೆ. ಹೌದು,

 ಕೆಲ ದಿನಗಳ ಹಿಂದೆ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಹಿನ್ನಲೆ ಬೆಳಗಾವಿಯ ಕ್ಯಾಂಪ್​ನ ಮಹಿಳಾ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪುಟ್ ಪಾತ್ ಮೇಲೆ ತಾಡಪಲ್ ಕಟ್ಟಿಕೊಂಡು ಅಕ್ಕ ಮಂಗಲಾ ಅಜ್ಗಾಂವಕರ್(75) ಮತ್ತು ಮನೋರಮಾ(70) ಎಂಬುವವರು ಜೀವನ ನಡೆಸುತ್ತಿದ್ದು, ಎಂತಹವರನ್ನಾದರೂ ಕರುಳು ಹಿಂಡುವಂತೆ ಮಾಡುತ್ತದೆ.

ಪುಟ್​ಪಾತ್​ನಲ್ಲಿ ವಾಸ

ಇನ್ನು ಇವರ ಸಾಮಾಗ್ರಿಗಳೆಲ್ಲವೂ ಬಿದ್ದ ಮನೆಯಲ್ಲಿಯೇ ಹಾನಿಯಾಗಿದೆ. ಹೆಚ್ಚು ಮಳೆಯಾದರೆ ಈ ವೃದ್ಧೆಯರು ನೀರಿನಲ್ಲಿ ನೆನೆದುಕೊಂಡೆ  ಜೀವನ ಸಾಗಿಸುತ್ತಿದ್ದಾರೆ.

ನಡುಗುತ್ತಾ ಬೀದಿಯಲ್ಲಿಯೇ ವೃದ್ದೆಯರು ಕಾಲ ಕಳೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದು, ಇತ್ತ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.

ಸ್ಕೂಲ್​ನಿಂದ ಬರುವ ಊಟವನ್ನ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಈ ಕುರಿತು ಅವರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದ್ದು, ವೃದ್ಧೆ ಮಂಗಲಾ, ‘ನಾವು ಹುಟ್ಟಿದ್ದು ಇಲ್ಲೇ, ಸಾಯುವುದು ಇಲ್ಲೇ ಅಂತಿದ್ದಾರೆ.

ಈಗಲಾದರೂ ಇವರ ಸಹಾಯಕ್ಕೆ ಜಿಲ್ಲಾಡಳಿತ ಬರಲಿ ಎಂಬುದೇ ನಮ್ಮ ಆಶಯ.


Spread the love

About Laxminews 24x7

Check Also

ಡಿಕೆಶಿ-ಸಿದ್ದರಾಮಯ್ಯ ಬಣಗಳ ಮುಖಂಡರ ನಡುವೆ ಪರಸ್ಪರ ವಾಕ್ಸಮರ

Spread the loveತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ