ದರ್ಶನ್ ಬಂಧನ: ಸಾಕ್ಷಿಗಳ ಹಿಂದೆ ಬಿದ್ದ ಪೊಲೀಸರು: ಮಹತ್ವದ ಸಾಕ್ಷಿಗಳು ವಶಕ್ಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಡು ಹಿಡಿದು ಜಾಲಾಡುತ್ತಿರುವ ಪೊಲೀಸರಿಗೆ ದಿನವೂ ಹೊಸ ಹೊಸ ಸಾಕ್ಷಿಗಳು ಕೈಗೆ ಸಿಗುತ್ತಿವೆ. ಈ ಸಾಕ್ಷಿಗಳನ್ನು ಈಗಾಗಲೇ ನ್ಯಾಯಾಧಿಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಾಕ್ಷ್ಯಗಳ ಹೇಳಿಕೆಗಳನ್ನು ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.

ದರ್ಶನ್ ಕನ್ನಡ ಚಿತ್ರ ರಂಗ ಸ್ಟಾರ್ ನಟ. ದೊಡ್ಡ ಸೆಲಿಬ್ರಿಟಿ. ಪ್ರಭಾವ ಶಾಲಿ ಕೂಡ ಹೌದು. ಹೀಗಾಗಿ ತಾನು ಮಾಡಿದ ಕೃತ್ಯದ ಸಾಕ್ಷ್ಯಗಳನ್ನು ಏಳು ಸುತ್ತಿನ ಕೋಟೆಯಂತಹ ರಕ್ಷಣೆ ನೀಡಲಾಗಿದೆ. ಈ ಕೋಟೆಯ ಒಂದೊಂದೆ ಬಾಗಿಲುಗಳನ್ನು ತೆರೆದು ಪ್ರಕರಣ ಸಾಕ್ಷಿಗಳನ್ನು ವಶಕ್ಕೆ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಇಂಚಿಂಚು ಬಿಡದ ಪೊಲೀಸರು, ಸಾಕ್ಷ್ಯಗಳ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಸಾಕ್ಷಿಗಳನ್ನು ಈಗಾಗಲೇ 164 ವಿಧಿಯಡಿ ಹೇಳಿಕೆ ದಾಖಲಿಸಲಾಗಿದೆ.
ಹಲವರಿಗೆ ನೋಟಿಸ್
ಪೊಲೀಸರು ಸಣ್ಣ ಎಳೆ ಸಿಕ್ಕರೂ ಅದನ್ನು ಹಿಡಿದುಕೊಂಡು ಮುಂದೆ ನಡೆಯಲು ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಯಾರ ಮೇಲೆ ಎಲ್ಲಾ ಸಂಶಯ ಬಂದಿದೇಯೋ ಅವರಿಗೆಲ್ಲಾ ಖಾಕಿ ಪಡೆ ನೊಟೀಸ್ ನೀಡಿದೆ. ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಆಪ್ತಿ ಸಮತಾಳಿಗೂ ನೊಟೀಸ್ ನೀಡಲಾಗಿದೆ. ಇವರು ಪವಿತ್ರಾಗೆ ಬರುತ್ತಿದ್ದ ಕಮೆಂಟ್‌ಗಳಿಗೆ ಉತ್ತರಿಸುವ ಕೆಲಸವನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮೋಹನ್ ರಾಜ್ ಸೇರಿದಂತೆ 3 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಖುದ್ದು ಪಲೋಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದರು. ಪೊಲೀಸ್ಟ್ ಕಸ್ಟಡಿಯಲ್ಲಿದ್ದಾಗ ದರ್ಶನ್ 40 ಲಕ್ಷ ಹಣವನ್ನು ಪಡೆದ ಬಗ್ಗೆ ತಿಳಿಸಿದ್ದರು. ಈ ಕುರಿತಾಗಿ ಮೋಹನ್ ರಾಜ್ ವಿಚಾರಣೆ ಎದುರಿಸಬೇಕಾಗಿದೆ. ಹಣ ನೀಡಿದ್ದರ ಹಿಂದಿನ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಪ್ಲ್ಯಾನ್ ಮಾಡಿಕೊಂಡಿದ್ದಾರೆ
Laxmi News 24×7