Breaking News

ಭಕ್ತರ ಸೋಗಿನಲ್ಲಿ ಬಂದು ಸ್ವಾಮೀಜಿಯನ್ನು ಬೆದರಿಸಿ ಮಠದಲ್ಲಿ ದರೋಡೆ

Spread the love

ರಾಯಚೂರು: ತಡರಾತ್ರಿ ಭಕ್ತರ ಸೋಗಿನಲ್ಲಿ ಬಂದು ಮಠದಲ್ಲಿ ಲಕ್ಷಾಂತರ ಹಣ, ಚಿನ್ನಾಭರಣ ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಜಿಲ್ಲೆಯ ಲಿಂಗಸುಗೂರು ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಕಳ್ಳತನ ನಡದಿದೆ.

ತಡರಾತ್ರಿ ಇಬ್ಬರು ಮಠಕ್ಕೆ ಬಂದಿದ್ದು, ನಾವು ಗುಲ್ಬರ್ಗದಿಂದ ಬಂದಿದ್ದು, ಮಠದ ಭಕ್ತರಾಗಿದ್ದೇವೆ ಎಂದು ಬಂದು ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿಯ‌ನ್ನು ಬೆದರಿಸಿ ಚಿನ್ನಾಭರಣ, ನಗದು ಹಣ ದೋಚಿದ್ದಾರೆ.

20 ಲಕ್ಷ ನಗದು ಹಣ, 80 ಗ್ರಾಂ ಚಿನ್ನಾಭರಣ, 7 ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸುಮಾರು 35 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಲಾಗಿದೆ. ರಾತ್ರಿ ಮಠದಲ್ಲಿ ಮಲಗಲು ಆಶ್ರಯ ಕೇಳಿಕೊಂಡು ಬಂದಿದ್ದರು. ಮಧ್ಯರಾತ್ರಿ ಸ್ವಾಮೀಜಿ ಕೋಣೆಯ ಬಾಗಿಲು ತೆಗೆಯಿಸಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಸುಲಿಗೆ‌ ಮಾಡಲಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ದುಡಿಯುವ ಕಾರ್ಯಕರ್ತರ ಪಡೆ ರಚಿಸುವುದೇ ಕಾಂಗ್ರೆಸ್ ಪ್ರಚಾರ ಸಮಿತಿಯ ಉದ್ದೇಶ:ವಿನಯಕುಮಾರ ಸೊರಕೆ

Spread the love ಚಿಕ್ಕೋಡಿ-“ಸೇನಾಧಿಪತಿಗಳನ್ನು ಹುಟ್ಟುಹಾಕುದಷ್ಟೇ ಅಲ್ಲ, ಸೈನಿಕರ ಅವಶ್ಯಕತೆಯೂ ಕಾಂಗ್ರೆಸ್ ಪಕ್ಷಕ್ಕಿದೆ. ಹೀಗಾಗಿ ಪದಾಧಿಕಾರಿಗಳ ನೇಮಕದೊಂದಿಗೆ ಪಕ್ಷಕ್ಕೆ ದುಡಿಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ