ನವದೆಹಲಿ: ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜನೆ ಮಾಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಪ್ರತಿಷ್ಠಿತ ವಿಶ್ವಕಪ್ ಗೆದ್ದು 13 ವರ್ಷಗಳ ಕಪ್ ದಾಹವನ್ನು ನೀಗಿಸಿರುವ ಟೀಮ್ ಇಂಡಿಯಾ ಇಂದು ಬೆಳಗ್ಗೆ ತವರಿಗೆ ಮರಳಿದೆ.
ತಾಯ್ನಾಡಿಗೆ ಮರಳಿದ ರೋಹಿತ್ ಶರ್ಮ ಪಡೆಗೆ ಭರ್ಜರಿ ಸ್ವಾಗತ ಕೋರಲಾಗಿದೆ.
ವೆಸ್ಟ್ಇಂಡೀಸ್ನ ಬಾರ್ಬಡೋಸ್ನಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಟೀಮ್ ಇಂಡಿಯಾ ಇಂದು (ಜುಲೈ 04) ಬೆಳಗ್ಗೆ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನಸ್ತೋಮ ರೋಹಿತ್ ಪಡೆಗೆ ಜೈಕಾರಗಳು ಮೂಲಕ ಅದ್ಧೂರಿ ಸ್ವಾಗತ ಕೋರಿದರು. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ರೋಹಿತ್ ಶರ್ಮ ವಿಶ್ವಕಪ್ ಮೇಲೆತ್ತಿ ಪ್ರದರ್ಶಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.