Breaking News

ತಾಯಿಯ ಎದೆ ಹಾಲನ್ನು ಹೆಚ್ಚಿಸಲು ಈ ಗಿಡಮೂಲಿಕೆ ಬಳಸಿ

Spread the love

ಭೂಮಿಯ ಮೇಲೆ ಹಲವಾರು ರೀತಿಯ ಔಷಧೀಯ ಗಿಡಗಳಿವೆ. ಇದರಿಂದಾಗಿ ಅವುಗಳನ್ನು ವಿವಿಧ ಔಷಧಿಗಳು ಮತ್ತು ಪರಿಹಾರ ಕ್ರಮಗಳಲ್ಲಿ ಬಳಕೆ ಮಾಡುತ್ತಾರೆ.

ಆಯುರ್ವೇದದ ಪ್ರಕಾರ, ಕೆಲವು ಗಿಡಮೂಲಿಕೆಗಳು ದೇಹದ ಪ್ರಮುಖ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆ. ಅಂತಹ ಔಷಧೀಯ ಗುಣಗಳನ್ನು ಹೊಂದಿರುವ ‘ಶತಾವರಿ’ ಎಂಬ ಶಕ್ತಿಶಾಲಿ ಗಿಡಮೂಲಿಕೆ ಬಗ್ಗೆ ಕೇಳಿದ್ದೀರಾ? ಇದರಿಂದ ಉಪಯೋಗವೇನು? ಯಾವೆಲ್ಲಾ ಕಾಯಿಲೆಗಳನ್ನು ಗುಣಪಡಿಸಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

ತಾಯಿಯ ಎದೆ ಹಾಲನ್ನು ಹೆಚ್ಚಿಸುತ್ತದೆ

Ayurveda Medicine: ತಾಯಿಯ ಎದೆ ಹಾಲನ್ನು ಹೆಚ್ಚಿಸಲು ಈ ಗಿಡಮೂಲಿಕೆ ಬಳಸಿ

ಸಾಮಾನ್ಯವಾಗಿ ಹೆರಿಗೆ ಆದ ಬಳಿಕ ಕೆಲವು ತಾಯಂದಿರಲ್ಲಿ ಎದೆ ಹಾಲು ಕಡಿಮೆಯಾಗುತ್ತದೆ. ಈ ಸಮಸ್ಯೆಗೆ ಹಲವಾರು ರೀತಿಯ ಔಷಧಿಗಳನ್ನು ಮಾಡಲಾಗುತ್ತದೆ. ಆದರೆ ತಾಯಿ ಎದೆ ಹಾಲು ಕಡಿಮೆಯಾದಾಗ ಅದನ್ನು ಕ್ರಮೇಣವಾಗಿ ಹೆಚ್ಚಿಸಲು ಇರುವ ಅತ್ಯುತ್ತಮ ಗಿಡಮೂಲಿಕೆ ಎಂದರೆ ಅದು ಶತಾವರಿ ಅಥವಾ ಶತಮೂಲಿ.

ಇದರ ಚೂರ್ಣ ಅಥವಾ ಪುಡಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲನ್ನು ಉತ್ಪತ್ತಿ ಮಾಡುತ್ತದೆ. ಬಾಳಂತಿಯರಿಗೆ, ಈ ಗಿಡಮೂಲಿಕೆ ಬಿಟ್ಟರೆ ಇಷ್ಟು ಒಳ್ಳೆಯ ಮತ್ತು ಆರೋಗ್ಯಕ್ಕೆ ಪೂರಕವಾದ ಇನ್ನೊಂದು ಔಷಧ ಸಿಗುವುದಿಲ್ಲ.

ಇನ್ನು ಈ ಸೊಪ್ಪನ್ನು ದನಗಳಿಗೂ ಕೊಡಲಾಗುತ್ತದೆ. ಅಲ್ಲದೆ ಇದನ್ನು ತರಕಾರಿಯಾಗಿಯೂ ಬಳಸಲಾಗುತ್ತದೆ. ಏಕೆಂದರೆ ಇದು ತಾಯಿಯ ಎದೆ ಹಾಲು ಹೆಚ್ಚಿಸುವುದರೊಂದಿಗೆ, ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

ಇದೆಲ್ಲದರ ಜೊತೆಗೆ ಈ ಗಿಡವನ್ನು ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ, ಗರ್ಭಕೋಶದ ಸಮಸ್ಯೆಗೆ, ಮಕ್ಕಳಾಗದಿರುವವರಿಗೆ ಮತ್ತು ಮಕ್ಕಳು ಆದ ಮೇಲೆ ಬಾಳಂತಿಯರಿಗೂ ಇದರ ಚೂರ್ಣವನ್ನು ತಿನ್ನಲು ಕೊಡುತ್ತಾರೆ.


Spread the love

About Laxminews 24x7

Check Also

ಡಿಕೆಶಿ-ಸಿದ್ದರಾಮಯ್ಯ ಬಣಗಳ ಮುಖಂಡರ ನಡುವೆ ಪರಸ್ಪರ ವಾಕ್ಸಮರ

Spread the loveತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ