ಬೆಂಗಳೂರು, ಜೂ.25- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಇತರರು ಈಗಾಗಲೇ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದು, ಇತ್ತ ವಿಜಯನಗರ ಉಪವಿಭಾಗದ ಪೊಲೀಸರು ಆದಷ್ಟು ಶೀಘ್ರ ಚಾರ್ಜ್‍ಶೀಟ್ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ.
ಪೊಲೀಸರು ವಿಶ್ರಾಂತಿ ಪಡೆಯದೆ ತಮಗಿರುವ ಸಮಯಾ ವಕಾಶದಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲು ಶರವೇಗದಲ್ಲಿ ಹಲವು ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸಲು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ.
ತಂಡ ರಚನೆ:
ಪೊಲೀಸರು ಪ್ರತ್ಯೇಕ ತಂಡಗಳನ್ನಾಗಿ ರಚಿಸಿಕೊಂಡು ಪರಸ್ಪರ ಸಹಕಾರದೊಂದಿಗೆ ಕರ್ತವ್ಯದಲ್ಲಿ ತೊಡಗಿದ್ದಾರೆ.ಈಗಾಗಲೇ ದರ್ಶನ್ ಹಾಗೂ ಆತನ ಗ್ಯಾಂಗ್‌ಅನ್ನು ಬಂಧಿಸಿ ಸತತ 12 ದಿನಗಳ ಕಾಲ ತಮ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿ ಸಾಕಷ್ಟು ಹೇಳಿಕೆಗಳನ್ನು ದಾಖಲಿಸಿ ಬರೋಬ್ಬರಿ 139 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸದ್ಯ ಆರೋಪಿಗಳೆಲ್ಲರೂ ನ್ಯಾಯಂಗ ಬಂಧನದ ಬಳಿಕವೂ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಾರ್ಯಪ್ರವೃತ್ತರಾಗಿದ್ದು, ಒಂದು ತಂಡ ಆನ್ಫೀಲ್‌್ಡನಲ್ಲಿ ಇನ್ನೊಮೆ ಸಾಕ್ಷ್ಯ ಸಂಗ್ರಹಿಸುತ್ತಿದ್ದರೆ, ಮತ್ತೊಂದು ತಂಡ ಡಿಜಿಟಲ್ ಸಾಕ್ಷ್ಯ, ಇನ್ನೊಂದು ತಂಡ ಪೇಪರ್ ವರ್ಕ್ ಮತ್ತು ಚಾರ್ಜ್ಶೀಟ್ ತಯಾರಿಯಲ್ಲಿ ನಿರತವಾಗಿದೆ.
ಅನುಭವಿಗಳ ನೆರವು:
ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ತಯಾರಿಕೆಗೆ ಕೆಲವು ಅನುಭವಿಗಳ ನೆರವನ್ನೂ ಸಹ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಟೆಕ್ನಿಕಲ್ ಸಾಕ್ಷ್ಯ:
ಇದರ ನಡುವೆ ಮಹತ್ವದ ಟೆಕ್ನಿಕಲ್ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ತನಿಖಾ ತಂಡಗಳು ಎಲ್ಲ 17 ಆರೋಪಿಗಳ ಮೊಬೈಲ್ಗಳ ಡಾಟಾ ರಿಟ್ರೀವ್ ಕಾರ್ಯ ನಡೆಸಲಾಗಿದೆ.ಸಿಐಡಿ ಟೆಕ್ನಿಕಲ್ ಸೆಲ್ನಲ್ಲಿ ದರ್ಶನ್, ಪವಿತ್ರಾಗೌಡ, ಪವನ್ ಹಾಗೂ ವಿನಯ್ ಮೊಬೈಲ್ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಮೊಬೈಲ್ ಡೇಟಾ ರಿಟ್ರೀವ್ ನಡೆಸಿ ಸಾಕ್ಷ್ಯಗಳ ಸಂಗ್ರಹ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ.