ಮೇಷ: ಕೆಲಸಕ್ಕೆ ವಿರಾಮವಾಗಿರುವುದರಿಂದ ಮನಸ್ಸಿಗೂ ವಿರಾಮ. ಸಂಸಾರದ ಆವಶ್ಯ ಕತೆಗಳತ್ತ ಗಮನ. ಉದ್ಯಮಿಗಳಿಗೆ ಅಭಿವೃದ್ಧಿಯ ಮಾರ್ಗಗಳ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಸಂಜೆ ಬಂಧು- ಮಿತ್ರರ ಭೇಟಿ.
ವೃಷಭ: ಕೆಲವರಿಗೆ ಅನಿರೀಕ್ಷಿತ ಧನಪ್ರಾಪ್ತಿಯ ಸಾಧ್ಯತೆ.
ವ್ಯವಹಾರ ವಿಸ್ತರಣೆಗೆ ವಿವಿಧ ಮೂಲಗಳಿಂದ ಸಹಾಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನೆ.
ಮಿಥುನ: ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಬಂಧುಗಳ ಆಗಮನ. ಅನವಶ್ಯ ವೆಚ್ಚಗಳ ಬಗ್ಗೆ ಎಚ್ಚರ. ಆಸ್ಪತ್ರೆ, ಅನಾಥಾಶ್ರಮಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ ಸ್ಥಳ ಬದಲಾವಣೆಯಿಂದ ಹರ್ಷ.
ಕರ್ಕಾಟಕ: ಸಹೋದ್ಯೋಗಿಗಳ ಸೌಹಾರ್ದ ಭೇಟಿ. ಆಪ್ತರಿಂದ ನಿರೀಕ್ಷಿತ ಸಹಾಯ. ವ್ಯವಹಾರ ಸಂಬಂಧ ದಕ್ಷಿಣ ದಿಕ್ಕಿಗೆ ಪ್ರಯಾಣ. ವಿದ್ಯಾರ್ಥಿಗಳ ಭವಿಷ್ಯ ಚಿಂತನೆ. ದಿನವಿಡೀ ಮಿಶ್ರ ಫಲಗಳ ಅನುಭವ.
ಸಿಂಹ: ನಿರೀಕ್ಷೆ ಮೀರಿದ ಸುಖ ಪ್ರಾಪ್ತಿ. ದೇವತಾನುಗ್ರಹಕ್ಕಾಗಿ ಪ್ರಾರ್ಥನೆ. ವೃತ್ತಿಪರರಿಗೆ ಹಲವು ಕೆಲಸಗಳ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ. ವಿದ್ಯಾರ್ಥಿಗಳ ಲೋಕಜ್ಞಾನ ವೃದ್ಧಿಗೆ ಅನುಕೂಲದ ವಾತಾವರಣ.
ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗ ಅರಸುವವರಿಗೆ ಶುಭ ಸಮಾಚಾರ ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ತುಲಾ: ರಜಾದಿನವಾದರೂ ಮಾಡಿ ಮುಗಿ ಯದಷ್ಟು ಕೆಲಸಗಳು. ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ.
ವೃಶ್ಚಿಕ: ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ಹಿರಿಯರ ಮನೆಯಲ್ಲಿ ದೇವತಾಕಾರ್ಯ. ವ್ಯವಹಾರದ ಸಂಬಂಧ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣ. ಮಕ್ಕಳ ಹೊಸ ಉದ್ಯಮ ಪ್ರಗತಿ. ಹಿರಿಯರ ಆರೋಗ್ಯ ಸುಧಾರಣೆ.
ಧನು: ದಂಪತಿಗಳ ನಡುವೆ ಅನುರಾಗ ವೃದ್ಧಿ. ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿ ಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆಯಿಂದ ಶುಭ. ಅವಿವಾಹಿತರಿಗೆ ವಿವಾಹ ಯೋಗ.
ಮಕರ: ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅದೃಷ್ಟ. ದೇವ ಮಂದಿರ ಸಂದರ್ಶನ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಭೇಟಿಯಿತ್ತು ಸಾಂತ್ವನ ಹೇಳುವ ಅವಕಾಶ.
ಕುಂಭ: ಸದುದ್ದೇಶಕ್ಕೆ ಸಂಚಿತ ಧನ ವಿನಿ ಯೋಗ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಅಘೋಷಿತ ಗುರುಸ್ಥಾನ. ಆಸ್ಪತ್ರೆ, ವೃದ್ಧಾಶ್ರಮಕ್ಕೆ ಭೇಟಿ ಅಪರೂಪದ ಬಂಧುಗಳ ಆಗಮನ. ಮಾತಿನಲ್ಲಿ ಹಿಡಿತವಿರಲಿ.
ಮೀನ: ನಾಳೆಯ ಕಾರ್ಯಗಳ ಆಯೋಜನೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖರೊಡನೆ ಸಮಾಲೋಚನೆ. ಹಳೆಯ ಸಹಚರರ ಭೇಟಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳ ಚಟುವಟಿಕೆಗಳಿಂದ ಆನಂದ. ಹಿರಿಯರೊಂದಿಗೆ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ.