Breaking News

ಕ್ಲಾಸ್​ರೂಮ್​ನಲ್ಲಿ ವಿದ್ಯಾರ್ಥಿಗಳು ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಶಿಕ್ಷಕಿ! ವಿಡಿಯೋ ವೈರಲ್​

Spread the love

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ಶಿಕ್ಷಕರು ತಮ್ಮ ಬೋಧನೆಯಿಂದ ವಿದ್ಯಾರ್ಥಿಗಳ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತಾರೆ. ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ, ಒಳ್ಳೆಯದು ಮತ್ತು ಕೆಟ್ಟದ್ದನ್ನು ತಿಳಿ ಹೇಳಿ, ಸರಿದಾರಿಯಲ್ಲಿ ನಡೆಸುತ್ತಾರೆ.ಕ್ಲಾಸ್​ರೂಮ್​ನಲ್ಲಿ ವಿದ್ಯಾರ್ಥಿಗಳು ಮಾಡಿದ ಕೆಲಸ ನೋಡಿ ಕಣ್ಣೀರಿಟ್ಟ ಶಿಕ್ಷಕಿ! ವಿಡಿಯೋ ವೈರಲ್​

ಹೀಗಾಗಿಯೇ ವಿದ್ಯಾರ್ಥಿಗಳು ಸಹ ಇಂತಹ ಶಿಕ್ಷಕರ ಮೇಲೆ ಅಪಾರ ಪ್ರೀತಿಯನ್ನು ತೋರಿಸುತ್ತಾರೆ.

ಇತ್ತೀಚಿಗೆ ಕೆಲವು ವಿದ್ಯಾರ್ಥಿಗಳು ಮಾಡಿದ ಕೆಲಸವನ್ನು ನೋಡಿ ಶಿಕ್ಷಕಿಯೊಬ್ಬರು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಸಾಮಾಜಿಕ ಜಾಲತಾಣಗಳ ಯುಗ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಪ್ರತಿಯೊಂದು ಸುದ್ದಿಯೂ ದಿನನಿತ್ಯ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತವೆ. ಆದರೆ ಕೆಲವೊಂದು ವಿಡಿಯೋಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ವೈರಲ್ ಆಗುತ್ತವೆ. ಈ ಸಾಲಿಗೆ ಶಾಲಾ-ಕಾಲೇಜುಗಳಲ್ಲಿ ನಡೆಯುವ ಘಟನೆಗಳೂ ಕೂಡ ಸೇರಿವೆ.

ವಿದ್ಯಾರ್ಥಿಗಳ ಡಾನ್ಸ್​ ರೀಲ್ಸ್​ ಸೇರಿದಂತೆ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳ ವಿಶೇಷ ಕ್ಷಣಗಳಿಗೆ ಸಂಬಂಧಿಸಿದ ವಿಡಿಯೋ ಆಗಾಗ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಕೆಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಿಗೆ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ನೀಡಿದ ಹಠಾತ್ ಸರ್ಪ್ರೈಸ್​ ನೋಡಿ ಶಿಕ್ಷಕಿ ಕಣ್ಣೀರು ಹಾಕಿದ ದೃಶ್ಯ ವೈರಲ್​ ಆಗಿರುವ ವಿಡಿಯೋದಲ್ಲಿದೆ.

ನೆಚ್ಚಿನ ಶಿಕ್ಷಕಿಗೆ ಉಡುಗೊರೆಯೊಂದನ್ನು ನೀಡಲು ತರಗತಿಗೆ ಆಹ್ವಾನಿಸಲಾಯಿತು. ಶಿಕ್ಷಕಿ ತರಗತಿಯನ್ನು ಪ್ರವೇಶಿಸಿದಾಗಿನಿಂದ ವಿಡಿಯೋ ತೆಗೆಯಲಾರಂಭಿಸಿದರು. ಕ್ಲಾಸ್​ರೂಮ್​ಗೆ ಎಂಟ್ರಿಯಾಗುತ್ತಿದ್ದಂತೆ ವಿಡಿಯೋ ರೆಕಾರ್ಡಿಂಗ್​ ಮಾಡುತ್ತಿರುವುದನ್ನು ನೋಡಿದ ಶಿಕ್ಷಕಿಗೆ ಮೊದಮೊದಲು ನಾಚಿಕೆಯಾಯಿತು. ಇದಾದ ಬಳಿಕ ಶಿಕ್ಷಕಿ ಒಳಗೆ ಬಂದು ಕುರ್ಚಿಯ ಮೇಲೆ ಕುಳಿತರು. ಈ ಕ್ರಮದಲ್ಲಿ ವಿದ್ಯಾರ್ಥಿಗಳು ತಾವು ತಂದಿದ್ದ ಉಡುಗೊರೆಯನ್ನು ಮೇಡಂಗೆ ನೀಡಿದರು. ಬಳಿಕ ಶಿಕ್ಷಕಿ ಉಡುಗೊರೆಯನ್ನು ತೆರೆದಾಗ ಅದರಲ್ಲಿದ್ದ ಫೋಟೋ ಫ್ರೇಮ್​ನಲ್ಲಿ ತಮ್ಮ ಫೋಟೋಗಳನ್ಗನು ನೋಡಿ ಭಾವುಕರಾದರು.


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ