Breaking News

ಭಾರತದಲ್ಲಿ ಅತಿ ಹೆಚ್ಚು ಅವಳಿ ಮಕ್ಕಳು ಜನಿಸುವ ಅಪರೂಪದ ಗ್ರಾಮ…!

Spread the love

ವಳಿ ಮಕ್ಕಳನ್ನು ಹೊಂದುವುದು ಅಪರೂಪ. ಆದರೆ ಭಾರತದ ಹಳ್ಳಿಯೊಂದರಲ್ಲಿ ಅವಳಿ ಮಕ್ಕಳ ಜನನ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಕೊಡಿನ್ಹಿ ಗ್ರಾಮವನ್ನು ಅವಳಿಗಳ ಗ್ರಾಮ ಎಂದೂ ಕರೆಯುತ್ತಾರೆ.

ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 1000 ಮಕ್ಕಳಲ್ಲಿ ಕೇವಲ 9 ಅವಳಿ ಮಕ್ಕಳು ಜನಿಸುತ್ತಾರೆ.

ಆದರೆ ಕೇರಳದ ಈ ಹಳ್ಳಿಯಲ್ಲಿ ಪ್ರತಿಯೊಂದು ಮನೆಯಲ್ಲೂ ಅವಳಿ ಮಕ್ಕಳಿದ್ದಾರೆ. 2008ರ ಮಾಹಿತಿ ಪ್ರಕಾರ ಎರಡು ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ 400.

ವಿಜ್ಞಾನಿಗಳಿಂದಲೂ ಬಿಡಿಸಲಾಗದ ರಹಸ್ಯ!

ಕೋಡಿನ್ಹಿ ಗ್ರಾಮದಲ್ಲಿ ಅವಳಿ ಮಕ್ಕಳ ಸಂಖ್ಯೆ ಹೆಚ್ಚಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳಿಂದ ಸಹ ಸಾಧ್ಯವಾಗಿಲ್ಲ.

ಇದರಿಂದಾಗಿ ಈ ಗ್ರಾಮ ನಿಗೂಢವಾಗಿಯೇ ಉಳಿದಿದೆ. ಈ ಅವಳಿ ಗ್ರಾಮದಲ್ಲಿ ಟ್ವಿನ್ಸ್ ಅಂಡ್ ಕಿನ್ ಅಸೋಸಿಯೇಷನ್ ​​ಕೂಡ ರಚನೆಯಾಗಿದ್ದು, ಅವಳಿ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ.

ಕೇರಳದ ಈ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ನೀಲಿ ಬಣ್ಣದ ಬೋರ್ಡ್‌ ಗಮನಸೆಳೆಯುತ್ತದೆ. ದೇವರ ಅವಳಿ ಗ್ರಾಮಕ್ಕೆ ಸುಸ್ವಾಗತ ಎಂದು ಇಲ್ಲಿ ಬರೆಯಲಾಗಿದೆ.

ಕೇವಲ 2 ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ 400 ಅವಳಿಗಳಿರುವುದು ದಾಖಲೆಯೇ ಸರಿ. ಈ ಗ್ರಾಮದ ಹೆಸರಲ್ಲಿ ಗಿನ್ನಿಸ್‌ ವಿಶ್ವ ದಾಖಲೆ ಕೂಡ ಸೃಷ್ಟಿಯಾಗಿದೆ.

ಇಲ್ಲಿನ ನಿವಾಸಿಗಳ ಪ್ರಕಾರ ಕಳೆದ ಮೂರು ತಲೆಮಾರುಗಳಿಂದ ಇಲ್ಲಿ ಹೆಚ್ಚು ಅವಳಿ ಮಕ್ಕಳು ಜನಿಸುತ್ತಿದ್ದಾರೆ. ಮೊದಲ ಬಾರಿಗೆ 1949ರಲ್ಲಿ ಅವಳಿಗಳ ಜನನವಾಗಿತ್ತು ಎಂದು ಹೇಳಲಾಗುತ್ತದೆ.


Spread the love

About Laxminews 24x7

Check Also

ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ

Spread the loveಚಾಮರಾಜನಗರ, ಫೆಬ್ರವರಿ 05: ಎಂಆರ್​ಪಿ ಬಾರ್​ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ