ಬಾಲಕನೋರ್ವ ಯದ್ವಾತದ್ವಾ ಕಾರು ಓಡಿಸಿ ಮಹಿಳೆಗೆ ಡಿಕ್ಕಿ ಹೊಡೆದ ಅಪಘಾತದ ವಿಡಿಯೋವೊಂದು ವೈರಲ್ ಆಗಿದೆ.
ಪುಣೆಯಲ್ಲಿ ಮೇ 19 ರಂದು ಕಲ್ಯಾಣಿ ನಗರದಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ಪೋರ್ಷೆ ಸ್ಪೋರ್ಟ್ಸ್ ಕಾರಿನಿಂದ ಇಬ್ಬರಿಗೆ ಡಿಕ್ಕಿ ಹೊಡೆದ ಘಟನೆಯನ್ನು ಜನರು ಮರೆತಿಲ್ಲವಾದರೂ, ಆಳಂಡಿಯಲ್ಲಿ ನಡೆದ ಮತ್ತೊಂದು ಭಯಾನಕ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಈ ಘಟನೆಯಲ್ಲಿ, 17 ವರ್ಷದ ಇನ್ನೊಬ್ಬ ಬಾಲಕ ಯದ್ವಾತದ್ವಾ ಕಾರು ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಮತ್ತು ಘಟನೆಯ ವೀಡಿಯೊ ವೈರಲ್ ಆಗಿದೆ.