ಗುಬ್ಬಿ: ಬೀದಿನಾಯಿ ದಾಳಿಗೆ ತಾಲ್ಲೂಕಿನ ಕಡಬ ಹೋಬಳಿ, ಕಲ್ಲೂರು ಗ್ರಾಮದ (65) ವೃದ್ಧೆ ಗಂಗಮ್ಮ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಗ್ರಾಮದ ನಾಲ್ವರಿಗೆ ಬೀದಿ ನಾಯಿಯೊಂದು ತೀವ್ರವಾಗಿ ಕಡಿದು ಹಲ್ಲೆ ಮಾಡಿತ್ತು. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಗಂಗಮ್ಮ ಅವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಚೇತರಿಸಿಕೊಂಡಿದ್ದರು.
ಗಂಗಮ್ಮ ಅವರು ತೀವ್ರ ಅಸ್ವಸ್ಥರಾಗಿದ್ದರಿಂದ ತುಮಕೂರು ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದರೂ ನಿಧನರಾಗಿದ್ದರೆ. ಗ್ರಾಮದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು ಗ್ರಾಮ ಪಂಚಾಯಿತಿಯವರು ಕೂಡಲೆ ಕ್ರಮವಹಿಸಿ ಬೀದಿನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Laxmi News 24×7