Breaking News

ಪ್ರಾಣಿಗಳ ಬಾಯಾರಿಕೆ ತಣಿಸುವ ರೈತ

Spread the love

ಬೈಲಹೊಂಗಲ: ಬಿಸಿಲಿನ ಬೇಗೆಯಿಂದ ಬಳಲಿದ ಪಶು, ಪಕ್ಷಿ, ದನ-ಕರು, ಕುರಿಗಳಿಗೆ ನಿತ್ಯವೂ ಕುಡಿಯಲು ಉಚಿತವಾಗಿ ನೀರು ಪೂರೈಸುತ್ತಿರುವ ರೈತ ಬಾಬು ನಾಯ್ಕರ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ.

ಪಟ್ಟಣದ ಹೊಸೂರ ರಸ್ತೆಯ ತಮ್ಮ ಬರಡು ಕೃಷಿ ಭೂಮಿಯಲ್ಲಿರುವ ಹೊಂಡದಲ್ಲಿ ಬೋರ್‌ವೆಲ್ ಮೂಲಕ ಎರಡು ಹೊತ್ತು ನೀರು ಸಂಗ್ರಹಿಸಿ, ನಿತ್ಯ ನೂರಾರು ಕುರಿಗಳ ದಾಹ ತಣಿಸುತ್ತಿದ್ದಾರೆ.

ಬೈಲಹೊಂಗಲ | ಪ್ರಾಣಿಗಳ ಬಾಯಾರಿಕೆ ತಣಿಸುವ ರೈತ

ಬಿಸಿಲಿನ ದಗೆಗೆ ಬಾಯಾರಿದ ಕುರಿಗಳು ದಾರಿ ಮಧ್ಯೆ ಈ ರೈತನ ಜಮೀನಿಗೆ ಬಂದು ಹೊಂಡದಲ್ಲಿ ಸಂಗ್ರಹಿಸಿರುವ ನೀರು ಸೇವಿಸಿ, ಗಿಡ-ಮರಗಳ ನೆರಳಲ್ಲಿ ವಿರಮಿಸುತ್ತವೆ.

ಕೆರೆ, ಬಾವಿ, ಹಳ್ಳಗಳು ಒಣಗಿದ್ದರಿಂದ ಕುರಿಗಾಹಿಗಳು ಸುಮಾರು ಐದಾರು ಕಿ.ಮೀ ಸುತ್ತಾಡಿ, ಮೇಯಿಸಿಕೊಂಡು ಸಂಜೆ ಮನೆಗೆ ವಾಪಸ್ಸಾಗುತ್ತಿದ್ದರು. ಈಗ ಹೊಲಗಳು ಬರಡಾಗಿರುವುದರಿಂದ ಹಳ್ಳದ ಗಿಡಗಳನ್ನೇ ಹುಡುಕುತ್ತ, ಸುಮಾರು 15 ಕಿ.ಮೀ. ದೂರ ಹೋದರೂ ನೀರು, ಆಹಾರ ಸಿಗುತ್ತಿಲ್ಲ. ಇದರಿಂದ ಕುರಿಗಳನ್ನು ಮೇಯಿಸಲು ತುಂಬಾ ತೊಂದರೆ ಆಗುತ್ತಿದೆ. ಇತ್ತ ಕುರಿಗಳನ್ನು ಮಾರಾಟ ಮಾಡಲಾಗದೇ, ಇಟ್ಟುಕೊಳ್ಳಲಾಗದೇ, ಕುರಿಗಾರರು ನೋವಿನಿಂದ ಚಡಪಡಿಸುವಂತಾಗಿದೆ.

ಕುರಿಗಳಲ್ಲಿ ಅನಾರೋಗ್ಯ: ಹೊಲಗಳಲ್ಲಿ ಒಣ ಮುಳ್ಳು, ಕಂಟಿಗಳಂತಹ ಆಹಾರ ಸೇವಿಸಿ ಹಾಗೂ ಕಲುಷಿತ ನೀರನ್ನು ಕುಡಿದು ಕುರಿಗಳು ಸೊರಗುತ್ತಿವೆ. ಇಲ್ಲವೇ ಅಸ್ವಸ್ಥಗೊಳ್ಳುತ್ತಿವೆ. ತಾಪ ಮಾನದ ಏರಿಕೆಯಿಂದ ನಾಲಿಗೆ ಬೇನೆ, ಕಾಲು ಬೇನೆ, ಅತಿಯಾದ ಜ್ವರ, ಭೇದಿಯಂತಹ ರೋಗಗಳಿಗೆ ತುತ್ತಾಗಿ ಕುರಿಗಳು ಸಾವಿಗೀಡಾಗುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ಕುರಿಗಾರರ ಬದುಕು ಕಷ್ಟಕರವಾಗಿದೆ. ಕುರಿಗಾರರು ಚಿಕ್ಕ ಕಾಲ್ನಡಿಗೆಯಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾ, ಕತ್ತಲಲ್ಲಿ ಬದುಕು ಕಳೆಯುತ್ತಿದ್ದಾರೆ.


Spread the love

About Laxminews 24x7

Check Also

ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ “ಅಕ್ಕ ಕೆಫೆ” ಕ್ಯಾಂಟಿನ್‌ನ ನಿರ್ಮಾಣ ಕಾಮಗಾರಿಯ ಉದ್ಘಾಟನೆ

Spread the love  ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಳಗಾವಿ ಸಮೀಪದ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ, ಮಹಿಳಾ ಸ್ವಾವಲಂಬಿ ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ