Breaking News
Home / ರಾಜಕೀಯ / ಇಂಜಿನಿಯರಿಂಗ್ ಶುಲ್ಕ ಶೇ. 10ರಷ್ಟು ಹೆಚ್ಚಳ

ಇಂಜಿನಿಯರಿಂಗ್ ಶುಲ್ಕ ಶೇ. 10ರಷ್ಟು ಹೆಚ್ಚಳ

Spread the love

ಬೆಂಗಳೂರು: ರಾಜ್ಯದ ಎಲ್ಲಾ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳು ಸೇರಿದಂತೆ ಈ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗಳ ಶುಲ್ಕವನ್ನು ಶೇ. 10ರಷ್ಟು ಏರಿಕೆ ಮಾಡಲಾಗಿದೆ.

ರಾಜ್ಯದ ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ, ಕಾಮೆಡ್ -ಕೆ ಕೋಟಾ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಸೀಟುಗಳ ಶುಲ್ಕವನ್ನು 2024- 25 ನೇ ಸಾಲಿನಲ್ಲಿ ಶೇಕಡ 10ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್: ಇಂಜಿನಿಯರಿಂಗ್ ಶುಲ್ಕ ಶೇ. 10ರಷ್ಟು ಹೆಚ್ಚಳ

ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಶೇ. 45ರಷ್ಟಿದ್ದು, ಕಾಮೆಡ್ -ಕೆ ಕೋಟಾದ ಸೀಟುಗಳು ಶೇ. 30ರಷ್ಟು ಇವೆ. ಉಳಿದವು ಆಡಳಿತ ಮಂಡಳಿ ಹಾಗೂ ಎನ್ನ್.ಆರ್.ಐ. ಕೋಟಾ ಸೀಟುಗಳಾಗಿವೆ. ಇವುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳು ಹಾಗೂ ಕಾಮೆಡ್- ಕೆ ಸೀಟುಗಳ ಶುಲ್ಕವನ್ನು ಶೇಕಡ 10ರಷ್ಟು ಹೆಚ್ಚಳ ಮಾಡಲಾಗಿದೆ.

ಸರ್ಕಾರಿ ಕೋಟಾದ ಟೈಪ್ -1, ಟೈಪ್ -2 ಪ್ರಸ್ತುತ ಶುಲ್ಕ 69,214 ರೂ.ನಿಂದ 76,135 ರೂ., 76,905 ರೂ.ನಿಂದ 84,595 ರೂ.ಗಳಿಗೆ ಹೆಚ್ಚಳವಾಗಲಿದೆ.

ಕಾಮೆಡ್ -ಕೆ ಕೋಟಾ ಪ್ರಸ್ತುತ 1. 69 ಲಕ್ಷ ರೂನಿಂದ 1.86 ಲಕ್ಷ ರೂ., 2.37 ಲಕ್ಷ ರೂ. ಇರುವ ಕಾಮೆಡ್ -ಕೆ ಕೋಟಾ ಸೀಟುಗಳ ಶುಲ್ಕ 2.64 ಲಕ್ಷ ರೂ.ಗಳಿಗೆ ಹೆಚ್ಚಳವಾಗಲಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಎರಡು ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

Spread the love ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸೆರೆ ಹಿಡಿಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ