ನವದೆಹಲಿ : ಓಂ ಶ್ರೀ ರಾಮ್.. ಓಂ ಶ್ರೀ ರಾಮ್.. ಓಂ ಶ್ರೀ ರಾಮ್.. ಹೀಗೆ ರಾಮನಾಮ ಬರೆದಿದ್ದು ಕೇಂದ್ರ ಮಂತ್ರಿ ರಾಮ್ ಮೋಹನ ನಾಯ್ಡು ಕಿಂಜರಪು.
ಕೇಂದ್ರ ವಿಮಾನಯಾನ ಸಚಿವರಾಗಿ ಇಂದು ಅಧಿಕಾರ ವಹಿಸಿಕೊಂಡ ರಾಮ್ ಮೋಹನ್ ನಾಯ್ಡು.. 21 ಬಾರಿ ರಾಮನಾಮ ಬರದ ನಂತರ ಅಧಿಕಾರ ಸ್ವೀಕರಿಸಿದ್ದಾರೆ.
ತಾಯಿಯ ಆದೇಶ ಪಾಲಿಸಿರುವ ಸಚಿವ ನಾಯ್ಡು ಅಧಿಕಾರ ಸ್ವೀಕರಿಸುವ ಮುನ್ನ ರಾಮನಾಮ ಬರೆದು ಭಕ್ತಿ ಮೆರೆದಿದ್ದಾರೆ. ಈ ವೇಳೆ ಮಾತನಾಡಿದ ನಾಯ್ಡು, ಭಾರತದಲ್ಲಿ ವಿಮಾನಯಾನ ದರಗಳನ್ನು ಕಡಿಮೆ ಮಾಡುವ ಕುರಿತು ಚಿಂತಿಸುತ್ತೇನೆ ಎಂದು ಹೇಳಿದ್ದಾರೆ
ತೆಲುಗುದೇಶಂ ಪಾರ್ಟಿಯಿಂದ ಆಯ್ಕೆಯಾಗಿರುವ ರಾಮ್ ನಾಯ್ಡು ಆಂಧ್ರಪ್ರದೇಶದ ಶ್ರೀಕಾಕುಳಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮೋದಿ ಸಂಪುಟ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.
ಅಧಿಕಾರ ವಹಿಸಿಕೊಳ್ಳವ ಮುನ್ನ 21 ಬಾರಿ “ಓಂ ಶ್ರೀ ರಾಮ್” ಎಂದು ಬರೆದಿರುವುದು ಭಾರೀ ಗಮನ ಸೆಳೆಯುತ್ತಿದೆ. ಅದರಲ್ಲೂ ಎಡಪಂಥೀಯರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎನ್ನುವ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ.