ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರು ಇದೀಗ ಡಿಮ್ಯಾಂಡ್ ಮ್ಯಾನ್, ಇವರು ಇಂಡಿಯಾಕ್ಕೂ ಬೇಕು ಎನ್ಡಿಎಗೂ ಬೇಕು, ಆದರೆ ನಿತೀಶ್ ಕುಮಾರ್ ಮಾತ್ರ ಎನ್ಡಿಎಗೆ ತಮ್ಮ ಬೆಂಬಲ ನೀಡಿದ್ದಾರೆ.
ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿಕೊಂಡು, ಜತೆಯಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಎನ್‌ಡಿಎ ಸೇರಿಕೊಂಡಿದ್ದಾರೆ, ಆದರೆ ಇತ್ತ ಇಂಡಿಯಾ ಒಕ್ಕೂಟ ಅವರಿಗೆ ಪ್ರಧಾನಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ.
ಈ ಹಿಂದೆ ನಿತೀಶ್ ಕುಮಾರ್ ನಮ್ಮ ಜತೆಗೆ ನಿಂತರೇ ನಾವು ಅವರಿಗೆ ಉಪಪ್ರಧಾನಿ ಸ್ಥಾನ ನೀಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು.
ಆದರೆ ಇದೀಗ ಜೆಡಿಯು ಪಕ್ಷದ ನಾಯಕ ಕೆಸಿ ತ್ಯಾಗಿ ಅವರು ನಿತೀಶ್ ಅವರಿಗೆ ಇಂಡಿಯಾ ಒಕ್ಕೂಟ ಪ್ರಧಾನಿ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ.
ಆದರೆ ಅದನ್ನು ನಿತೀಶ್ ದಿಕ್ಕಾರಿಸಿದ್ದಾರೆ. ನಾವು ಎನ್‌ಡಿಎ ಜತೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ ಎಂದು ಕೆಸಿ ತ್ಯಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.