ಬೆಂಗಳೂರು : ಅಶ್ಲೀಲ ವಿಡಿಯೋ ಹಂಚಿಕೆ ಹಾಗೂ ಕಿಡ್ನ್ಯಾಪ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ತಾಯಿ ಭವಾನಿ ರೇವಣ್ಣ ಹಾಗೂ ಮಗ ಪ್ರಜ್ವಲ್ ರೇವಣ್ಣ ಅಕ್ಕಪಕ್ಕದ ಸೆಲ್ ನಲ್ಲಿದ್ದಾರೆ.
ಇಬ್ಬರೂ ಕೂಡ ಅಕ್ಕ ಪಕ್ಕದ ಸೆಲ್ ನಲ್ಲಿದ್ರೂ ಕೂಡ ಒಬ್ಬರನ್ನೊಬ್ಬರು ಮುಖ ನೋಡಿಕೊಂಡಿಲ್ಲ.
ಸುಮಾರು ಒಂದೂವರೆ ತಿಂಗಳಿನಿಂದ ಮಗನ ಮುಖ ನೋಡದ ಭವಾನಿ ರೇವಣ್ಣ ಎಸ್ ಐ ಟಿ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ.
ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಭವಾನಿ ರೇವಣ್ಣಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಈ ಬೆನ್ನಲ್ಲೇ ಎಸ್ ಐ ಟಿ ವಿಚಾರಣೆಗೆ ಹಾಜರಾಗಿದ್ದರು. ವಕೀಲರ ಜೊತೆ ಬಂದ ಭವಾನಿ ರೇವಣ್ಣ ಎಸ್ ಐ ಟಿ ವಿಚಾರಣೆಗೆ ಹಾಜರಾಗಿದ್ದಾರೆ . ಎಸ್ ಐ ಟಿ ನೀಡಿದ ಪ್ರಶ್ನೆಗೆ ಭವಾನಿ ರೇವಣ್ಣ ಕೇವಲ ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.