Breaking News

ಭಾರತ-ಪಾಕ್‌ ಪಂದ್ಯದ ಟಿಕೆಟ್‌ ದರ ದುಬಾರಿ

Spread the love

ನ್ಯೂಯಾರ್ಕ್‌: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಟಿ20 ವಿಶ್ವಕಪ್‌ ಮುಖಾಮುಖೀಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಆದರೆ ಈ ಪಂದ್ಯದ ಟಿಕೆಟ್‌ ಬೆಲೆ ದುಬಾರಿಯಾಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯಕ್ಕೆ ಐಸಿಸಿ ಜಾಹೀರಾತು ಪ್ರಕಟಿಸಿದ ಬೆನ್ನಲ್ಲೇ 20 ಲಕ್ಷಕ್ಕೂ ಅಧಿಕ ಜನರಿಂದ ಟಿಕೆಟ್‌ಗೆ

ಬೇಡಿಕೆ ಬಂದಿತ್ತು. ಹೀಗಾಗಿ ಎಲ್ಲರಿಗೂ ಟಿಕೆಟ್‌ ಒದಗಿಸುವುದು ಕಷ್ಟವಾಯಿತು ಎಂದು ಅಮೆರಿಕ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

ಈ ಪಂದ್ಯಕ್ಕೆ 300 ಡಾಲರ್‌ (25,000 ರೂ.) ಟಿಕೆಟ್‌ ಕೂಡ ಇದೆ. ಆದರೆ ಈ ಸೀಟ್‌ ಗಳ ಪ್ರಮಾಣ ಕಡಿಮೆ ಇದ್ದು, ಇವು ಈಗಾಗಲೇ ಮಾರಾಟವಾಗಿವೆ.

ಈಗ ಉಳಿದಿ ರುವುದು ಐಶಾರಾಮಿ ಟಿಕೆಟ್‌ಗಳು ಮಾತ್ರ. ಇದರ ಬೆಲೆ 2,500 -10,000 ಡಾಲರ್‌ನಷ್ಟಿದೆ (2.8 ಲಕ್ಷ ರೂ.ನಿಂದ 8.3 ಲಕ್ಷ ರೂ.).


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ