ಹೊಸದಿಲ್ಲಿ: ಆಂಧ್ರ ವಿಧಾನಸಭೆ, ಲೋಕಸಭೆ ಚುನಾವಣೆ ಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ (ಟಿಡಿಪಿ) ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಕುಟುಂ ಬದ ಆಸ್ತಿ ಮೌಲ್ಯವು 870 ಕೋಟಿ ರೂ. ಹೆಚ್ಚಳವಾಗಿದೆ. ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್ ಫುಡ್ಸ್ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು.
ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ ಬಂಡವಾಳ ಜೂ.7ಕ್ಕೆ 6,136 ಕೋಟಿ ರೂ.ಗೆ ಏರಿದೆ. ಈ ಮೂಲಕ ನಾಯ್ಡು ಕುಟುಂಬದ ನಿವ್ವಳ ಆಸ್ತಿ ಮೌಲ್ಯವೂ 870 ಕೋಟಿ ರೂ. ಏರಿ, 2,190 ಕೋಟಿ ರೂ.ಗೆ ತಲುಪಿದೆ.
ಬಿಜೆಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಸ್ಪಷ್ಟ ಬಹುಮತ ತಾನೊಂದೇ ಹೊಂದಿದೆ. ಕೇಂದ್ರ ಸರ್ಕಾರದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.