ದಾಂಡೇಲಿ: ನಗರದ ಲೆನಿನ್ ರಸ್ತೆಯಲ್ಲಿರುವ ಬುಕ್ ಸ್ಟಾಲ್ ವೊಂದರಲ್ಲಿ ಮೇ.31ರ ಶುಕ್ರವಾರ ನಸುಕಿನ ವೇಳೆ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಪುಸ್ತಕ ಮಳಿಗೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು 2 ಸಾವಿರ ರೂ. ನಗದು ಮತ್ತು ಅಗತ್ಯ ದಾಖಲೆ ಪತ್ರಗಳಿದ್ದ ತಿಜೋರಿ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಹೊತ್ತೊಯ್ದಿದ್ದಾರೆ.

ಘಟನೆಯ ಕುರಿತಂತೆ ಪುಸ್ತಕ ಮಳಿಗೆಯ ಮಾಲಕ ಅಲ್ಲಂಪ್ರಭು ಪಾಟೀಲ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Laxmi News 24×7