ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಳಮ್ಮವಾಡಿಯಲ್ಲಿರುವ ದೂಧಗಂಗಾ ನದಿಗೆ ಅಡ್ಡಲಾಗಿರುವ ಕಾಳಮ್ಮವಾಡಿ ಜಲಾಶಯದಲ್ಲಿ (Kalammawadi Dam) ಬಿರುಕು ಬಿಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಒಟ್ಟು 28 ಟಿಎಂಸಿ ಸಾಮರ್ಥ್ಯದ ಕಾಳಮ್ಮವಾಡಿ ಜಲಾಶಯದಲ್ಲಿ ಬಿರುಕು ಕಂಡುಬಂದಿದ್ದು ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ.
ಇದು ಕರ್ನಾಟಕದ ಗಡಿಭಾಗದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಡ್ಯಾಂ ಭರ್ತಿಯಾದಲ್ಲಿ ಕುಸಿಯುವ ಆತಂಕ ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಪಾತ್ರದ ನಿವಾಸಿಗಳಿಗೆ ಎದುರಾಗಿದೆ.
ಅಣೆಕಟ್ಟಿನಲ್ಲಿ ಬಿರುಕು ಕಾಣಿಸಿಕೊಂಡರೂ ಮಹಾರಾಷ್ಟ್ರ ಸರ್ಕಾರದ ನಿರ್ಲಕ್ಷ್ಯ ವಹಿಸಿರುವ ಕುರಿತು ಕೊಲ್ಲಾಪುರ ದಕ್ಷಿಣ ಶಾಸಕ ಸತೇಜ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಣೆಕಟ್ಟು ಸರಿಪಡಿಸದಿದ್ದರೆ ಜೂನ್ 3 ಕ್ಕೆ ಜಲಸಮಾಧಿಯ ಆಗುವ ಕುರಿತು ಉದ್ಧವ್ ಠಾಕ್ರೆ ಬಣದ ಶಿವಸೇನೆ ಶಾಸಕ ಮತ್ತು ಕಾರ್ಯಕರ್ತರು ಬೆದರಿಕೆಯೊಡ್ಡಿದ್ದಾರೆ.
Laxmi News 24×7