Breaking News

ಖಾಸಗಿ ವ್ಯಕ್ತಿಯೂ ಕ್ರಿಮಿನಲ್ ಕೇಸ್ ದಾಖಲಿಸಬಹುದು: ಹೈಕೋರ್ಟ್ ಮಹತ್ವದ ಆದೇಶ

Spread the love

ಬೆಂಗಳೂರು: ನಕಲಿ ದಾಖಲೆಗಳ ಕುರಿತಾಗಿ ಖಾಸಗಿ ವ್ಯಕ್ತಿಯೂ ಕ್ರಿಮಿನಲ್ ದೂರು ದಾಖಲಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಿವಾಸಿಯೊಬ್ಬರ ನಿವೇಶನ ಜಗಳದಲ್ಲಿ ನಕಲಿ ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು. ಅದರ ವಿರುದ್ಧ ಮೂಲ ದೂರುದಾರಿಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಕ್ಕಿಲ್ಲ.

ನ್ಯಾಯಾಲಯಕ್ಕೆ ಮಾತ್ರ ಹಕ್ಕಿದೆ ಎಂದು ಮಹಿಳೆಯೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಅವರ ವಾದ ತಿರಸ್ಕರಿಸಿ ಯಾವುದೇ ಬಾಧಿತ ವ್ಯಕ್ತಿ ಕ್ರಿಮಿನಲ್ ಪ್ರಕರಣ ಹೂಡಬಹುದು ಎಂದು ಆದೇಶಿಸಿದೆ.ಖಾಸಗಿ ವ್ಯಕ್ತಿಯೂ ಕ್ರಿಮಿನಲ್ ಕೇಸ್ ದಾಖಲಿಸಬಹುದು: ಹೈಕೋರ್ಟ್ ಮಹತ್ವದ ಆದೇಶ

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ವಾಸಂತಿ ಎಂಬುವವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಆದೇಶ ನೀಡಿದೆ.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಾಸಿಕ್ಯೂಷನ್ ಕ್ರಿಮಿನಲ್ ಕಾನೂನುಗಳಡಿ ಎರಡು ಪ್ರಕರಣಗಳನ್ನು ಪ್ರತ್ಯೇಕವಾಗಿ ಮುಂದುವರಿಸಬಹುದು. ಇದು ಒಂದೇ ವಿಷಯದ ಬಗ್ಗೆ ಎರಡು ಪ್ರಕರಣಗಳಾಗುವುದಿಲ್ಲ ಎಂದು ಹೇಳಿದೆ.

ಯಾವ ನ್ಯಾಯಾಲಯದ ಮುಂದೆ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆಯೋ ಅಂತಹ ವ್ಯಕ್ತಿ ವಿರುದ್ಧ ಕೋರ್ಟ್ ಸಹ ಸಿಆರ್ಪಿಸಿ ಸೆಕ್ಷನ್ 340ರ ಅಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಬಹುದು ಎಂದು ಆದೇಶ ನೀಡಲಾಗಿದೆ.

ಸುಪ್ರೀಂಕೋರ್ಟ್ ಬಂಡೆಕರ್ ಬ್ರದರ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಸಿಆರ್ಪಿಸಿ 195 ವಿಧಿಸಲು ನಿರ್ಬಂಧವಿದೆ ಎಂದು ಹೇಳಿದೆ. ಅದರಂತೆ ಭಾದಿತ ವ್ಯಕ್ತಿಯು ಕ್ರಿಮಿನಲ್ ಪ್ರಕರಣ ಹೂಡಲು ಅವಕಾಶವಿದೆ. ಬಾಧಿತ ವ್ಯಕ್ತಿ ಖಾಸಗಿ ವ್ಯಕ್ತಿಯಾಗಿದ್ದರೆ ಆತನಿಗೆ ಪೊಲೀಸ್ ಠಾಣೆಯಲ್ಲಿ ಅಥವಾ ಕೋರ್ಟ್ ಮುಂದೆ ದೂರು ದಾಖಲಿಸಲು ಖಂಡಿತ ಅವಕಾಶ ಇದೆ ಎಂದು ನ್ಯಾಯಪೀಠ ತಿಳಿಸಿದೆ.

ಪ್ರತಿವಾದಿ ಉಮೇಶ್ ವಿರುದ್ಧದ ಪ್ರಕರಣದಲ್ಲಿ ನಕಲಿ ದಾಖಲೆ ನೀಡಲಾಗಿದ್ದು, ಅವರಿಗೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶವಿದೆ ಎಂದು ಹೇಳಿದ ಹೈಕೋರ್ಟ್ ವಾಸಂತಿ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ