BSNL ಭಾರತದ ಹಳೆಯ ಟೆಲಿಕಾಂ ಕಂಪನಿ. ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ರಾಜನಂತೆ ಮೆರೆದ ಕಂಪನಿ, ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಮಾರುಕಟ್ಟೆಯಲ್ಲಿರುವ ಹಲವು ಟೆಲಿಕಾಂ ಕಂಪನಿಗಳ ಜೊತೆ ಸರ್ಕಾರಿ ಟೆಲಿಕಾಂ ಕಂಪನಿ ಸ್ಪರ್ಧೆ ಮಾಡುವಲ್ಲಿ ಕೊಂಚ ಹಿಂದೆ ಬಿದ್ದಿದೆ.
ಆದರೆ ಈಗ ಕಾಲ ಬದಲಾಗಿದೆ. ಬಿಎಸ್‌ಎನ್‌ಎಲ್ (BSNL) ಸಹ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ.
ಬಿಎಸ್‌ಎನ್‌ಎಲ್ ಬಿಟ್ಟಿರುವ ಆಫರ್ ಕಂಡು ಇತರ ಟೆಲಿಕಾಂ ಕಂಪನಿಗಳ ನಿದ್ದೆ ಗೆಟ್ಟಿದೆ ಎಂದರೆ ತಪ್ಪಾಗಲಾರದು. ಕಡಿಮೆ ಬೆಲೆಯಲ್ಲಿ ಅಧಿಕಾ ಲಾಭವನ್ನು ಗ್ರಾಹಕರಿಗೆ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಈ ರಿಚಾರ್ಜ್ (Recharge) ಮಾಡುವುದರಿಂದ ಗ್ರಾಹಕ 150 ದಿನಗಳ ಕಾಲ ಉಚಿತ ಅನಿಯಮಿತ ಕರೆಗಳನ್ನು ಹಾಗೂ ಲಿಮಿಟೆಡ್ ಡೆಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿರುವ ಹಲವು ಕಂಪನಿಗಳ ಜೊತೆ ಟೆಲಿಕಾಂ ಕಂಪನಿ ಸ್ಪರ್ಧೆ ನಡೆಸಿದ್ದು, ಗ್ರಾಹಕರ ಚಿತ್ತ ಕದ್ದಿದೆ.
ಈ ರಿಚಾರ್ಜ್ ಪ್ಲ್ಯಾನ್‌ನಲ್ಲಿ ಏನಿದೆ ?
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಬೇಕಾದ ಪ್ಲ್ಯಾನ್ ಎಲ್ಲ ಮಾಡುತ್ತಿದೆ. ಹೊಸ ರಿಚಾರ್ಜ್ ಅನುಸಾರ ಗ್ರಾಹಕ 397 ರೂಪಾಯಿಯ ರಿಚಾರ್ಜ್ ಮಾಡಿದ್ದಲ್ಲಿ, ಬಳಕೆದಾರರಿಗೆ ಒಟ್ಟು 150 ದಿನಗಳ ವ್ಯಾಲಿಡಿಟಿಯನ್ನು ನೀಡಲಾಗುತ್ತಿದೆ. ಈ ಯೋಜನೆ ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ. ವೆಬ್ ಸೈಟ್‌ನಲ್ಲಿ ಈ ರಿಚಾರ್ಜ್‌ನ್ನು STV_397 ಹೆಸರಿನೊಂದಿಗೆ ಗುರುತಿಸಬಹುದಾಗಿದೆ. ಈ ರಿಚಾರ್ಜ್ ಮಾಡಿದಾಗ ಬಳಕೆದಾರರ ಸಿಮ್ 150 ದಿನಗಳವರೆಗೆ ಸಕ್ರಿಯವಾಗಿರುತ್ತದೆ. ಇದಲ್ಲದೆ, ಯೋಜನೆಯು ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ ಪ್ರಯೋಜನವನ್ನು ಸಹ ನೀಡುತ್ತದೆ.
ಪ್ರತಿ ದಿನ ಎಷ್ಟು ಡೇಟಾ ನೀಡುತ್ತದೆ?
ಬಳಕೆದಾರ ಈ ರಿಚಾರ್ಜ್‌ನ್ನು ಮಾಡಿಸಿಕೊಂಡಲ್ಲಿ ದೇಶದ ಯಾವುದೇ ನೆಟ್‌ವರ್ಕ್‌ನಲ್ಲಿ 30 ದಿನಗಳವರೆಗೆ ಉಚಿತ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದಲ್ಲದೆ, 30 ದಿನಗಳವರೆಗೆ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಲಾಭ ಪಡೆಯಬಹುದಾಗಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು ಒಟ್ಟು 60GB ಡೇಟಾದ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಬಳಕೆದಾರರು ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳ ಪ್ರಯೋಜನವನ್ನು ಸಹ ಪಡೆಯುತ್ತಾರೆ.
30 ದಿನಗಳ ನಂತರವೂ, ಒಳಬರುವ ಕರೆಗಳನ್ನು ಉಚಿತವಾಗಿ ಸ್ವೀಕರಿಸ ಬಹುದಾಗಿದೆ. ಮತ್ತು ಸಿಮ್ ಕಾರ್ಡ್ ಸಕ್ರಿಯವಾಗಿರುತ್ತದೆ. ಇದರ ಹೊತಾಗಿಯೂ ಗ್ರಾಹಕ ಡೇಟಾ ಹಾಗೂ ಕರೆಗಳನ್ನು ಮಾಡಲು ಬಿಎಸ್‌ಎನ್‌ಎಲ್ ಟಾಪ್ ಅಪ್ ಪ್ಲ್ಯಾನ್‌ಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬೇಕು. ಈ ಪ್ರಿಪೇಯ್ಡ್ ಯೋಜನೆಯನ್ನು ಹೊರತುಪಡಿಸಿ, BSNL 150 ದಿನಗಳ ಮಾನ್ಯತೆಯೊಂದಿಗೆ ಮತ್ತೊಂದು ಯೋಜನೆಯನ್ನು ಹೊಂದಿದೆ. ಈ ಯೋಜನೆಯ ಬೆಲೆ 699 ರೂ.
699 ರಿಚಾರ್ಜ್ ಪ್ಲ್ಯಾನ್‌ನಲ್ಲಿ ಏನಿದೆ?
ಬಿಎಸ್‌ಎನ್‌ಎಲ್ ಇದನ್ನು ಹೊರತು ಪಡಿಸಿ ಮತ್ತೊಂದು 699 ರಿಚಾರ್ಜ್ ಪ್ಲ್ಯಾನ್ ಜಾರಿ ಮಾಡಿದೆ. ಇದರಲ್ಲಿ ಬಳಕೆ ದಾರರಿಗೆ 130 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಸರ್ಕಾರಿ ಕಂಪನಿಯು ಈ ಯೋಜನೆಯಲ್ಲಿ 20 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡಿದೆ. ಈ ರೀತಿಯಾಗಿ, ಒಟ್ಟು 150 ದಿನಗಳ ಮಾನ್ಯತೆ ಲಭ್ಯವಿದೆ. ಈ ರಿಚಾರ್ಜ್ ಮಾಡಿಸಿದಲ್ಲಿ ಉಚಿತ ಕರೆಗಳನ್ನು ಮಾಡುವ ಸೌಲಭ್ಯ ನೀಡಲಾಗಿದೆ. ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 100 ಉಚಿತ SMS ಮತ್ತು 0.5GB ಡೇಟಾವನ್ನು ನೀಡಲಾಗುತ್ತದೆ.