Breaking News

ಮೂಡಲಗಿ: ಖಾನಟ್ಟಿಯ ಶಿವಲಿಂಗೇಶ್ವರ ರಥೋತ್ಸವ ಇಂದು

Spread the love

ಮೂಡಲಗಿ: ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಸಿದ್ಧಿ ಪುರುಷ ಜಗದ್ಗುರು ಶಿವಲಿಂಗೇಶ್ವರರ ಜಾತ್ರೆ ಮತ್ತು ರಥೋತ್ಸವವು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಅವರ ಸನ್ನಿಧಿಯಲ್ಲಿ ಮೇ 20ರಂದು ಸಂಜೆ 5ಕ್ಕೆ ನಡೆಯಲಿದೆ.

ವರ್ಷದಲ್ಲಿ ಮೂರು ಬಾರಿ ಜಾತ್ರೆ ನಡೆಯುವ ವಿಶಿಷ್ಟ ಸಂಪ್ರದಾಯವನ್ನು ಖಾನಟ್ಟಿ ಶಿವಲಿಂಗೇಶ್ವರ ದೇವಸ್ಥಾನ ಹೊಂದಿದೆ.ಮೂಡಲಗಿ: ಖಾನಟ್ಟಿಯ ಶಿವಲಿಂಗೇಶ್ವರ ರಥೋತ್ಸವ ಇಂದು

ಶ್ರಾವಣ ಮಾಸ, ಶಿವರಾತ್ರಿ ದಿನಗಳಂದು ಜಾತ್ರೆ ನಡೆಯುತ್ತದೆ. ಬಸವ ಜಯಂತಿ ನಂತರ ಬರುವ ಸೋಮವಾರದಂದು ನಡೆಯುವ ಜಾತ್ರೆಯು ಅವಿಗಳಲ್ಲಿ ಪ್ರಮುಖವೆನಿಸಿದೆ.

ಹಿನ್ನೆಲೆ: ಕ್ರಿ.ಶ. 1645ರಲ್ಲಿ ಕಲಬುರ್ಗಿ ಬಳಿಯ ಕೊಳ್ಳುರು ಗ್ರಾಮದಲ್ಲಿ ಜನಿಸಿದ ಶಿವಲಿಂಗರರು ಲೋಕ ಸಂಚಾರ ಮಾಡುತ್ತಾ ಗೋಕಾಕ ಬಳಿಯ ಸಾವಳಗಿ ಘಟಪ್ರಭಾ ನದಿ ತಟ್ಟದಲ್ಲಿ ತಪಸ್ಸು ಮಾಡಿ ಅಲ್ಲಿಯೇ ನೆಲೆಸಿದರು. ಅನೇಕ ಪವಾಡಗಳ ಮೂಲಕ ಶಿವಲಿಂಗೇಶ್ವರರು ದೈವಾಂಶ ಮಹಿಮಾ ಪುರುಷರಾಗಿ ಭಕ್ತರ ಹೃದಯದಲ್ಲಿ ನೆಲೆಸಿದರು. ಶಿವಲಿಂಗೇಶ್ವರರು ತಮ್ಮ ಲೋಕ ಸಂಚಾರದ ಮಧ್ಯದಲ್ಲಿ ವಾಸ್ತವ್ಯ ಮಾಡಿದ್ದ ಸ್ಥಳವೇ ಈಗಿನ ಖಾನಟ್ಟಿಯ ಕ್ಷೇತ್ರವಾಗಿದೆ.

ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಶಿವಲಿಂಗೇಶ್ವರರ 360 ಮಠಗಳು, 1100 ಗದ್ಗುಗೆಗಳು ಇರುವ ಬಗ್ಗೆ ಡಾ. ಚಂದ್ರಶೇಖರ ಕಂಬಾರ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಅಂಥ ಗದ್ಗುಗೆ ಹೊಂದಿರುವ ಸ್ಥಳಗಳಲ್ಲಿ ಖಾನಟ್ಟಿಯೂ ಒಂದಾಗಿದೆ. ಕಲಬುರ್ಗಿಯ ಖ್ವಾಜಾ ಬಂದೇನವಾಜ ವಲಿ ಹಾಗೂ ಶಿವಲಿಂಗೇಶ್ವರರ ಅಂದಿನ ನಿಕಟ ಬಾಂಧವ್ಯ ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುತ್ತದೆ. ಹೀಗಾಗಿ ಶಿವಲಿಂಗೇಶ್ವರರು ನೆಲೆಸಿರುವ ಎಲ್ಲ ಕ್ಷೇತ್ರಗಳು ಸರ್ವಧರ್ಮಗಳ ಸಾಮರಸ್ಯಕ್ಕೆ ಹೆಸರಾಗಿವೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ