Breaking News

ಕೊಪ್ಪಳ | ವಾಣಿಜ್ಯ ಮಳಿಗೆಗಳಿಗೆ ಬೆಂಕಿ: ದಟ್ಟ ಹೊಗೆ

Spread the love

ಕೊಪ್ಪಳ: ನಗರದ ಮಧ್ಯಭಾಗದಲ್ಲಿರುವ ವಾಣಿಜ್ಯ ಮಳಿಗೆಗೆ ಸೋಮವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದ್ದು ದಟ್ಟ ಹೊಗೆ ಆವರಿಸಿಕೊಂಡಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದರು.

ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಎದುರು ಇರುವ ವರ್ಣೇಕರ್ ಕಾಂಪ್ಲೆಕ್ಸ್ ಮಾರ್ಗದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಬೆಂಕಿ ಅವಘಡ ನಡೆದಿದೆ.

ಪೇಂಟ್ ಮಾರಾಟದ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಒಂದೂವರೆ ತಾಸಿನಿಂದ ಪ್ರಯತ್ನ ಮಾಡಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ.

ಕೊಪ್ಪಳ | ವಾಣಿಜ್ಯ ಮಳಿಗೆಗಳಿಗೆ ಬೆಂಕಿ: ದಟ್ಟ ಹೊಗೆ

ವೇಗವಾಗಿ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುತ್ತಿರುವ ಕಾರಣ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಕಿ ‌ಹೊತ್ತಿಕೊಂಡ ಪಕ್ಕದ ಮಳಿಗೆಯಲ್ಲಿ ಎಸ್ ಬಿಐ ಎಟಿಎಂ ಕೇಂದ್ರ, ಅದರ ಪಕ್ಕದಲ್ಲಿ ಬ್ಯಾಟರಿಗಳ ಮಾರಾಟದ ಜೈಲಕ್ಷ್ಮಿ ಎಂಟರ್‌ ಪ್ರೈಸಸ್ ಇದೆ. ಅದರಲ್ಲಿರುವ ಬ್ಯಾಟರಿಗಳನ್ನು ಹೊರಗಡೆ ತರಲು ಅಂಗಡಿಯವರು ಹಾಗೂ ಸಾರ್ವಜನಿಕರು ಕಸರತ್ತು ನಡೆಸಿದರು‌. ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಜನರನ್ನು ನಿಯಂತ್ರಿಸಲು ಲಾಠಿ ಹಿಡಿದು ಕೆಲಸ ನಿರ್ವಹಿಸಿದರು


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ