Breaking News

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ತೆಲುಗು ನಟಿ ಹೇಮಾ ಪತ್ತೆ; ನಟಿಯರನ್ನು ಕರೆಸಿಕೊಂಡು ಏನ್‌ ಮಾಡ್ತಿದ್ರು?

Spread the love

ಬೆಂಗಳೂರು: ಸಿಸಿಬಿ ಪೊಲೀಸರು (CCB Police) ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ (Rave party) ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ (Andhra Pradesh) ತೆಲುಗು ನಟಿಯರನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದುದು ಪತ್ತೆಯಾಗಿದೆ.

ತೆಲುಗು ನಟಿ (Telugu Actress) ಹೇಮಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದುದು ಕಂಡುಬಂದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Electronic City) ಬಳಿಯ ಫಾರ್ಮ್ ಹೌಸ್ ಒಂದರ ಮೇಲೆ ದಾಳಿ ನಡೆಸಲಾಯಿತು. ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿವೆ. ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿವೆ. ಜೊತೆಗೆ ಪಾರ್ಟಿಯಲ್ಲಿ ಆಂಧ್ರ ಮತ್ತು ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದುದು ತಿಳಿದುಬಂದಿದೆ. ಡ್ರಗ್ಸ್‌ ಬಳಕೆ ಮತ್ತಿತರ ವಿಚಾರಗಳ ಬಗ್ಗೆ ಇವರನ್ನು ಪ್ರಶ್ನಿಸಲಾಗುತ್ತಿದೆ.Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ತೆಲುಗು ನಟಿ ಹೇಮಾ ಪತ್ತೆ; ನಟಿಯರನ್ನು ಕರೆಸಿಕೊಂಡು ಏನ್‌ ಮಾಡ್ತಿದ್ರು?

ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಕಂಡುಬಂದರು. ಇವರು ಆಹ್ವಾನಿತರಾಗಿ ಪಾರ್ಟಿಯಲ್ಲಿ ಭಾಗವಹಿಸಲು ಬಂದರೇ ಅಥವಾ ದುಡ್ಡು ನೀಡಿ ಕರೆಸಲಾಯಿತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇವರಲ್ಲಿ ಹಲವರು ತೆಲುಗು ನಟಿಯರು ಎಂದು ಗೊತ್ತಾಗಿದೆ. ಬಂದವರಲ್ಲಿ ಹೆಚ್ಚಿನವರು ಕೂಡ ತೆಲುಗಿನವರು.

ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್ ಫಾರ್ಮ್ಸ್ ಹೌಸ್‌ನಲ್ಲಿ ಬರ್ತ್‌ಡೇ ಹೆಸರಿನಲ್ಲಿ ಪಾರ್ಟಿ ನಡೆಯುತ್ತಿತ್ತು. ತಡರಾತ್ರಿ ಎರಡು ಗಂಟೆ ದಾಟಿದರೂ ಪಾರ್ಟಿ ನಡೆಯುತ್ತಿತ್ತು. ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳಿಗೆ ಇದರ ಮಾಹಿತಿ ತಿಳಿದು ದಾಳಿ ಮಾಡಿದ್ದಾರೆ. ಅವಧಿ ಮೀರಿ ಪಾರ್ಟಿ ಮಾಡಲಾಗಿದ್ದು, ಪಾರ್ಟಿಯಲ್ಲಿ ಸಾಕಷ್ಟು ಡ್ರಗ್ಸ್ ಪತ್ತೆಯಾಗಿವೆ.

ಕಾನ್‌ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರ ಮಾಲಿಕತ್ವದ ಫಾರ್ಮ್ ಹೌಸ್‌ನಲ್ಲಿ ಇದು ನಡೆದಿದ್ದು, ಹೈದರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಪಾರ್ಟಿಗೆ ಆಂಧ್ರಪ್ರದೇಶದಿಂದ ಫ್ಲೈಟ್‌ನಲ್ಲಿ ಹಲವರನ್ನು ಕರೆಸಿಕೊಂಡಿದ್ದ. ಒಂದು ಬೆಂಜ್ ಕಾರಿನಲ್ಲಿ ಆಂಧ್ರಪ್ರದೇಶದ ಎಂಎಲ್‌ಎ ಒಬ್ಬರ ಪಾಸ್ ಪತ್ತೆಯಾಗಿದೆ. ಎಂಎಲ್‌ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಕಂಡುಬಂದಿದೆ.

ಪಾರ್ಟಿ ಸ್ಥಳದಲ್ಲಿ ಹದಿನೈದಕ್ಕೂ ಹೆಚ್ಚು ವಿಲಾಸಿ ಕಾರುಗಳು ಪತ್ತೆಯಾಗಿವೆ. ದುಬಾರಿ ಮರ್ಸಿಡಿಸ್‌ ಬೆಂಜ್, ಜಾಗ್ವಾರ್, ಆಡಿ ಕಾರುಗಳಲ್ಲಿ ಕುಬೇರರು ಬಂದಿದ್ದುದು ಗೊತ್ತಾಗಿದೆ. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂದು ಆಯೋಜಿಸಲಾಗಿತ್ತು. ಭಾನುವಾರ ಸಂಜೆ ಐದು ಗಂಟೆಯಿಂದ ಬೆಳಗ್ಗೆ ಆರು ಗಂಟೆ ತನಕ ಪಾರ್ಟಿ ನಡೆಸಲು ಉದ್ದೇಶಿಸಲಾಗಿತ್ತು.

ನಗರದ ಒಳಭಾಗದಲ್ಲಿ ಸಿಸಿಬಿ ಪೊಲೀಸರು ಇಂಥ ಪಾರ್ಟಿಗಳ ಮೇಲೆ ನಿರಂತರ ನಿಗಾ ಇಟ್ಟಿದ್ದು, ದಾಳಿಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ನಗರದ ಹೊರ ವಲಯದಲ್ಲಿ ಕಳ್ಳತನದಿಂದ ಪಾರ್ಟಿ ಆಯೋಜಿಸಲಾಗಿದೆ. ಇಂಥ ಒಂದು ದಿನದ ಪಾರ್ಟಿಗೆ ಮೂವತ್ತರಿಂದ ಐವತ್ತು ಲಕ್ಷ ಖರ್ಚು ಮಾಡಲಾಗುತ್ತದೆ. ಪಾರ್ಟಿಯಲ್ಲಿ ಡಿಜೆಗಳು, ಮಾಡೆಲ್‌ಗಳು ಹಾಗು ಟೆಕ್ಕಿಗಳು ಪತ್ತೆಯಾಗಿದ್ದಾರೆ. ಡಿಜೆಗಳಾದ RABZ, KAYVEE ಮತ್ತು BLOODY MASCARA ಎಂಬವರು ಭಾಗಿಯಾಗಿದ್ದಾರೆ. ಎಲ್ಲರನ್ನೂ ಪ್ರಶ್ನಿಸಲಾಗುತ್ತಿದೆ. ನಾರ್ಕೊಟಿಕ್ಸ್ ಸ್ನಿಫರ್ ಡಾಗ್‌ಗಳಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಎಲ್ಲರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ