Breaking News
Home / ಜಿಲ್ಲೆ / ಬೆಳಗಾವಿ / ಖಾನಾಪುರ / ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

Spread the love

ಖಾನಾಪುರ: ತಾಲ್ಲೂಕಿನ ಹಲವೆಡೆ ಮಳೆಯ ಕೊರತೆಯ ಪರಿಣಾಮ ಈ ಸಲದ ಬೇಸಿಗೆಯಲ್ಲಿ ಎಲ್ಲೆಡೆ ಜಲಕ್ಷಾಮ ತಲೆದೋರಿದೆ. ಪ್ರಾಣಿ- ಪಕ್ಷಿಗಳು, ಜಲಚರಗಳಿಗೂ ಕುಡಿಯುವ ನೀರಿನ ತೊಂದರೆ ಉದ್ಭವಿಸಿದೆ. ಆದರೆ ಪಟ್ಟಣದಿಂದ 8 ಕಿ.ಮೀ ದೂರದಲ್ಲಿರುವ ಸಣ್ಣ ಹೊಸೂರು ಗ್ರಾಮದ ವಿಶಾಲವಾದ ಕೆರೆ ನೀರಿನಿಂದ ತುಂಬಿ ಕಂಗೊಳಿಸುತ್ತಿದೆ.

ಖಾನಾಪುರ: ಪ್ರವಾಸಿ ತಾಣವಾಗಲಿ ಸಣ್ಣಹೊಸೂರಿನ ದೊಡ್ಡ ಕೆರೆ, ಬರಗಾಲದಲ್ಲೂ ಜಲಪೂರಣ

ಇದನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣ ಮಾಡಬೇಕಾದ ಅವಶ್ಯಕತೆ ಇದೆ.

ಈ ಕೆರೆಯಲ್ಲಿ ನೀರಿನ ಸಂಗ್ರಹದ ಪರಿಣಾಮ ಅಂಚಿನಲ್ಲಿ ನೂರಾರು ಬಿಳಿ ಕೊಕ್ಕರೆ, ರಾಜಹಂಸ, ಪಾರಿವಾಳ, ಗಿಳಿ, ನವಿಲು, ಗುಬ್ಬಿಗಳು ಸೇರಿದಂತೆ ಸಾವಿರಾರು ಪಕ್ಷಿಗಳು ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ. ಸಣ್ಣ ನೀರಾವರಿ ಇಲಾಖೆಯ ಅಧೀನದ 10 ಎಕರೆ ವ್ಯಾಪ್ತಿಯ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಸಣ್ಣ ಹೊಸೂರು ಗ್ರಾಮದ ಪೂರ್ವ ದಿಕ್ಕಿನಲ್ಲಿ ಅರ್ಧ ಕಿ.ಮೀ ದೂರದಲ್ಲಿ ತೋಪಿನಕಟ್ಟಿ ರಸ್ತೆಯ ಮೇಲಿದೆ.

ಸಣ್ಣ ಹೊಸೂರು, ನಿಡಗಲ್, ಭಂಡರಗಾಳಿ, ತೋಪಿನಕಟ್ಟಿ ಗ್ರಾಮಗಳ ನೂರಾರು ಜಾನುವಾರುಗಳ ಪಾಲಿಗೆ, ಈಜು ಕಲಿಯಲು ಆಸಕ್ತ ಯುವಕ- ಯುವತಿಯರಿಗೆ ಈ ಕೆರೆ ಈಜುಕೊಳವಾಗಿದೆ. ನಿತ್ಯ ಕೆರೆಯ ತಿಳಿನೀರಿನ ಮೇಲೆ ಈಜಾಡುವ ರಾಜಹಂಸ ಹಾಗೂ ಕೊಕ್ಕರೆಗಳ ಅಂದವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.


Spread the love

About Laxminews 24x7

Check Also

ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಹಾರೂರಿನ ರೈತ

Spread the loveಖಾನಾಪೂರ ತಾಲೂಕಿನ ಹಾರೂರಿನಲ್ಲಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇರ್ನೋರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ