ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ
ಬೀದರ್: ಬಿಜೆಪಿಯವರಿಗೆ ಹೇಳಿಕೊಳ್ಳಲು ಯಾವುದೇ ವಿಷಯವಿಲ್ಲ. ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಯುವಕರ ಬದುಕು ಹಾಳು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್ ನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು, ಬಿಜೆಪಿ ಸ್ವೀಪ್ ಆಗಲಿದೆ.
ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಅಲೆಯಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನ ಯುವನಿಧಿ ಕಾರ್ಯಕ್ರಮ ಪದವೀಧರರಿಗೆ ಅನುಕೂಲವಾಗಿದೆ. ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಯುವ ನ್ಯಾಯದಡಿ ವಿದ್ಯಾವಂತ ಯುವಕರಿಗೆ ಕೌಶಲ ತರಬೇತಿ, ಶೈಕ್ಷಣಿಕ ಭತ್ಯೆ ಸೌಲಭ್ಯ ಸಿಗಲಿದೆ ಎಂದು ಖಂಡ್ರೆ ಹೇಳಿದರು