ಚಿಕ್ಕೋಡಿ: ಲೋಕಸಭೆಗೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಬೆಟ್ಟಿಂಗ್ ಅವ್ಯಾಹತವಾಗಿ ನಡೆದಿದೆ. ಪಟ್ಟಣದ ಮದ್ಯದ ಅಂಗಡಿ ಎದುರು ಸೋಮವಾರ ಇಬ್ಬರು ಕಾರ್ಯಕರ್ತರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ.ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ಬಾರಿ ಕಾಂಗ್ರೆಸ್‌ನ ಹಾಗೂ ಬಿಜೆಪಿಯ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಕಡೆಯ ಅಭಿಮಾನಿಗಳು ಸಾವಿರ, ಹತ್ತು ಸಾವಿರ, ಲಕ್ಷ ಹೀಗೆ ಬೆಟ್ಟಿಂಗ್ ಕಟ್ಟಿದ್ದಾರೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿವೆ. ಇದೇ ಕಾರಣಕ್ಕೆ ಸೋಮವಾರ ಇಬ್ಬರು ಕಾರ್ಯಕರ್ತರ ಮಧ್ಯೆ ಜಗಳ ನಡೆದಿದೆ. ಈ ಬಗ್ಗೆ ಇಬ್ಬರೂ ದೂರು ಕೊಟ್ಟಿಲ್ಲ.