ಗೋಕರ್ಣ: ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಪೂಜೆ ಮಾಡುತ್ತ ಬಂದಿರುವ ಕುಟುಂಬವೊಂದಕ್ಕೆ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ.
ಮೇ 9ರಂದು ಬೆಳಗ್ಗೆ ರವಿ ಮಹಾದೇವ ಅಡಿ ಹಾಗೂ ಕುಟುಂಬಸ್ಥರು ದೇವಸ್ಥಾನಕ್ಕೆ ಬಂದಾಗ 11 ಮಂದಿ ಅಡ್ಡಗಟ್ಟಿ ನಿಂದಿಸಿ ದರು.
ನಿಮಗೆ ಪೂಜೆಯ ಯಾವುದೇ ಹಕ್ಕಿಲ್ಲ ಎಂದು ಹೇಳಿ ಗರ್ಭಗುಡಿಯಿಂದ ಹೊರಹಾಕಿ, ಮತ್ತೆ ದೇವಸ್ಥಾನದ ಕಡೆಗೆ ಬಾರದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಲಕೃಷ್ಣ ಗಣಪತಿ ಜಂಬೆ, ಶ್ರೀಧರ ಬಾಲಕೃಷ್ಣ ಜಂಬೆ, ಗಣೇಶ ಪರಮೇಶ್ವರ ಜಂಬೆ, ಪರಮೇಶ್ವರ ಗಣೇಶ ಜಂಬೆ, ಗೋಪಾಲ ವಿನೋದ ಜಂಬೆ, ಸುಬ್ರಹ್ಮಣ್ಯ ವಿಶ್ವನಾಥ ಹೆಗಡೆ, ದತ್ತಾತ್ರೇಯ ನಾರಾಯಣ ಭಟ್, ಅಮೃತೇಶ ಶಿತಿಕಂಠ ಹಿರೇ, ಮಹಾಬಲೇಶ್ವರ ಬಾಲಕೃಷ್ಣ ಭಡ್ತಿ, ಪರಮೇಶ್ವರ ಸುಬ್ರಹ್ಮಣ್ಯ ಮಾರ್ಕಾಂಡೆ, ಕಾಮೇಶ್ವರ ಮಾಸ್ಕೇರಿ ವಿರುದ್ಧ ರವಿ ಮಹಾದೇವ ಅಡಿ ದೂರು ನೀಡಿದ್ದಾರೆ.