ಬೈಲಹೊಂಗಲ: ತಾಲ್ಲೂಕಿನ ಹಿಟ್ಟಣಗಿ ಗ್ರಾಮದಿಂದ ಮೇವು ಹೊತ್ತುಕೊಂಡು ಇಂಚಲ ರಸ್ತೆ ಮಾರ್ಗವಾಗಿ ರಾಯಬಾಗ ಕಡೆ ಗೋವಿನಜೋಳದ ಒಣಮೇವು ಸಾಗಿಸುತ್ತಿದ್ದ ಮೂರು ಟ್ರ್ಯಾಕ್ಟರ್‌ಗಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಒಣಮೇವು ಸುಟ್ಟು ಕರಕಲಾದ ಘಟನೆ ಇಂಚಲ ರಸ್ತೆಯ ಹತ್ತಿರ ಬುಧವಾರ ಘಟನೆ ಸಂಭವಿಸಿದೆ.

ಸುದ್ದಿ ತಿಳಿದು ತಕ್ಷಣ ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ್ಣಾ ನಾವದಗಿ ನೇತೃತ್ವದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು 3 ಗಂಟೆಗಳ ಕಾಲ ಹರಸಾಹಸ ಪಟ್ಟರು. ಮೇವಿಗೆ ಬೆಂಕಿ ತಗುಲಿದ್ದರಿಂದ ಸಂಕಷ್ಟದಲ್ಲಿರುವ ರೈತನ ಬದುಕಿನ ಮೇಲೆ ಗಾಯದ ಬರೆ ಎಳೆದಂತಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
Laxmi News 24×7