Breaking News

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

Spread the love

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ‘2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್ ಮಾಡುತ್ತೇವೆ. ಯುಪಿಎ ಆಡಳಿದಲ್ಲಿ ದೇಶದಲ್ಲಿ ಕಲ್ಲಿದ್ದಲು ಕೊರತೆ ಇತ್ತು.ಇದೀಗ ಕಲ್ಲಿದ್ದಲು ಹೆಚ್ಚುವರಿ ಉತ್ಪಾದನೆಯಾಗಿದೆ.ರಾಜ್ಯಕ್ಕೆ ಬೇಡಿಕೆಗಿಂತ ಹೆಚ್ಚಿನ ಕಲ್ಲಿದ್ದಲು ನೀಡಿದ್ದೇವೆ.

ರಾಜ್ಯದಿಂದ 900 ಕೋಟಿ ರೂ. ಬಾಕಿ ಬರಬೇಕಾಗಿದ್ದು, ರಾಜ್ಯ ಸರ್ಕಾರ ಪಾಪರ್ ಆಗಿದ್ದರಿಂದ ಇದುವರೆಗೂ ಬಾಕಿ ನೀಡಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಕಾಂಗ್ರೆಸ್ ವಿಚಾರ, ವಿಷಯ, ಅಭಿವೃದ್ಧಿಗಿಂತ ಅಪಪ್ರಚಾರ ಕೈಗೊಂಡಿತು.ಚುನಾವಣೆಯಲ್ಲಿ ನನ್ನ ತೇಜೋವಧೆ ಯತ್ನ ನಡೆಯಿತು. ನಾನು ಭ್ರಷ್ಟಚಾರಿ ಅಲ್ಲ, ನೈತಿಕ ಅಧಃಪತನಕ್ಕೂ ಇಳಿದಿಲ್ಲ. ನಾನು ಏನೆಂಬುದು ಹಾಗೂ ಅಭಿವೃದ್ಧಿ ಕಾರ್ಯಗಳು ಜನತೆ ಗೊತ್ತಿದೆ. ವ್ಯಕ್ತಿಗತ ಟೀಕೆಗೆ ಉತ್ತರಿಸಲಾರೆ’ ಎಂದರು.

2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ

‘ಅಭಿವೃದ್ಧಿ ವಿಚಾರದಲ್ಲಿ ಚರ್ಚೆ, ಪ್ರಚಾರಕ್ಜೆ ಮುಂದಾದರೆ ನಷ್ಟ ತನಗೆಂದು ಕಾಂಗ್ರೆಸ್ ಗೆ ಸ್ಪಷ್ಟ ಅರಿವಿತ್ತು.ಇನ್ನು 10-15 ವರ್ಷ ಮೋದಿಯವರ ಆಡಳಿತ ಮುಂದುವರೆದರೆ ದೇಶದ ಪರಿವರ್ತನೆ ಪರಿಣಾಮ ಇನ್ನಷ್ಟು ಹೆಚ್ಚಲಿದೆ’ ಎಂದರು.

‘ಎರಡನೇ ಹಂತದ ಮತದಾನದಲ್ಲಿ ಧಾರವಾಡ ಸೇರಿದಂತೆ ಎಲ್ಲ 14 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ